ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವ ಸುಂದರವಾಗಿರಲು ವಿಶ್ವಕರ್ಮ ಜನಾಂಗದ ಶ್ರಮ ಹೆಚ್ಚಾಗಿದೆ:ತಿಪ್ಪಸಂದ್ರ ಪ್ರಕಾಶ್

Published : 18 ಸೆಪ್ಟೆಂಬರ್ 2024, 7:21 IST
Last Updated : 18 ಸೆಪ್ಟೆಂಬರ್ 2024, 7:21 IST
ಫಾಲೋ ಮಾಡಿ
Comments

ಮಾಗಡಿ: ವಿಶ್ವ ಸುಂದರವಾಗಿ ಕಾಣಲು ವಿಶ್ವಕರ್ಮ ಜನಾಂಗದ ಶ್ರಮ ಸಾಕಷ್ಟಿದ್ದು, ರೈತನಿಂದ ಸೈನಿಕನವರೆಗೂ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಶ್ವಕರ್ಮ ಜನಾಂಗದ ಶ್ರಮ ಅಡಗಿದೆ ಎಂದು ವಿಶ್ವಕರ್ಮ ಸಮಾಜದ ತಾಲ್ಲೂಕು ಅಧ್ಯಕ್ಷ ತಿಪ್ಪಸಂದ್ರ ಪ್ರಕಾಶ್ ಹೇಳಿದರು.

ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ವಿಶ್ವಕರ್ಮ ಜನಾಂಗ ಜಯಂತಿಯಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಜನಾಂಗದವರು ನೇಗಿಲಿನಿಂದ ಸೈನಿಕರು ಬಳಸುವ ರಕ್ಷಣಾ ಪರಿಕರಗಳವರೆಗೆ ಎಲ್ಲಾ ವಸ್ತುಗಳನ್ನು ಮಾಡಿಕೊಡುತ್ತಾರೆ. ದೇವರ ಕೆತ್ತನೆ, ದೇವಾಲಯಗಳ ಕೆತ್ತನೆಯಲ್ಲೂ ಜನಾಂಗದವರ ಪಾತ್ರವಿದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲು ದೇವಸ್ಥಾನಗಳ ಸೌಂದರ್ಯದಲ್ಲಿ ಹಾಗೂ ಚಿನ್ನ ಬೆಳ್ಳಿ ಆಭರಣಗಳಲ್ಲೂ ವಿಶ್ವಕರ್ಮ ಜನಾಂಗದ ಶ್ರಮ ಅಡಗಿದೆ ಎಂದು ತಿಳಿಸಿದರು.

ತಹಶೀಲ್ದಾರ್ ಶರತ್ ಕುಮಾರ್ ಮಾತನಾಡಿ, ಕಾಡಿನಲ್ಲಿನ ಕಲ್ಲಿಗೆ ದೇವರ ರೂಪ ನೀಡಿ, ಜನಮನದಲ್ಲಿ ಶ್ರದ್ಧಾಭಾವ ತುಂಬುವ ಕೆಲಸವನ್ನು ವಿಶ್ವಕರ್ಮ ಜನಾಂಗದವರು ಮಾಡುತ್ತಾರೆ ಎಂದು ತಿಳಿಸಿದರು.

ಗ್ರೇಟ್ -2 ತಹಶೀಲ್ದಾರ್ ಪ್ರಭಾಕರ್, ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಮಂಜುನಾಥ್, ಖಜಾಂಚಿ ಹೊಸಪೇಟೆ ಮೂರ್ತಿ, ಕಾರ್ಯದರ್ಶಿ ಮಲ್ಲೇಶ್, ಉಪಾಧ್ಯಕ್ಷ ನಾಗೇಂದ್ರ, ಮುಖಂಡರಾದ ಲೋಕೇಶ್, ತೇಜು ಮೂರ್ತಿ, ಪ್ರಕಾಶ್, ಕುಮಾರ್, ನರಸಿಂಹಮೂರ್ತಿ, ರಂಗನಾಥ ಚಾರ್, ಅಪ್ಪಯ್ಯ, ಎಚ್.ಎಸ್. ಮೂರ್ತಿ, ಧನಂಜಯ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT