ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಭೇಟಿ

Last Updated 31 ಜುಲೈ 2022, 6:03 IST
ಅಕ್ಷರ ಗಾತ್ರ

ರಾಮನಗರ: ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಎಂ.ವಿ. ವೆಂಕಟೇಶ್ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಪನ್ಮೂಲ ಸಂಸ್ಥೆಯ ಕೇಂದ್ರ ಕಚೇರಿ ಮತ್ತು ಅಮೃತ ಎಫ್.ಪಿ.ಓ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕೇಂದ್ರಗಳಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ್, ಕೌಶಲಾಭಿವೃದ್ಧಿ ನಿರ್ದೇಶಕ ಉಮೇಶ್, ಕೃಷಿ ಸಹಾಯಕ ನಿರ್ದೇಶಕ ನರಸಿಂಹಯ್ಯ, ಸಂಸ್ಥೆಯ ಅಧ್ಯಕ್ಷ ಡಿ.ಸಿ. ರಾಮಚಂದ್ರ, ಶಿಕ್ಷಕರಾದ ಮುನಿಯಪ್ಪ, ಡಿ.ಜಿ. ಗಂಗಾಧರ್‌ ಇದ್ದರು.

ಕಾನೂನು ಪದವಿಗೆ ಪ್ರವೇಶಾತಿ

ರಾಮನಗರ: ಬಸವನಪುರದಲ್ಲಿ ಇರುವ ಸರ್ಕಾರಿ ಕಾನೂನು ಕಾಲೇಜಿನಲ್ಲಿ 2022-23ನೇ ಸಾಲಿಗೆ 5 ವರ್ಷದ ಬಿ.ಎ ಎಲ್.ಎಲ್.ಬಿ ಕಾನೂನು ಪದವಿಗೆ ಪ್ರವೇಶಾತಿ ಆರಂಭವಾಗಿದೆ.

ಆಸಕ್ತರು ಆಗಸ್ಟ್‌ 2ರವರೆಗೆ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಸರ್ಕಾರಿ ಕಾನೂನು ಕಾಲೇಜು, ಬಸವನಪುರ, ಬಿ.ಎಂ ರಸ್ತೆ, ರಾಮನಗರ ಇಲ್ಲಿ ಸಲ್ಲಿಸಬೇಕು ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಿತಿಗಾಗಿ ಮೊಬೈಲ್‌ 98447 76347
ಸಂಪರ್ಕಿಸಬಹುದು.

ವಿದ್ಯುತ್ ವ್ಯತ್ಯಯ

ರಾಮನಗರ: ಸೋಮನಹಳ್ಳಿ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಟಿ.ಕೆ. ಹಳ್ಳಿ ವಿದ್ಯುತ್ ಸ್ವೀಕರಣಾ ಕೇಂದ್ರದವರೆಗೆ ಹೊಸ ಗೋಪುರಗಳ ನಿರ್ಮಾಣ ಕಾಮಗಾರಿ ನಿಮಿತ್ತ ಕನಕಪುರ ಮತ್ತು ಹಾರೋಹಳ್ಳಿ ವಿದ್ಯುತ್ ಸ್ವೀಕರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ಆಗಸ್ಟ್ 1ರಿಂದ 12 ರವರೆಗೆ ಅನಿರೀಕ್ಷತ ವಿದ್ಯುತ್ ಅಡಚಣೆಯಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಡೀಸೆಲ್‌ಗೆ ಸಹಾಯಧನ

ರಾಮನಗರ: ಕೃಷಿ ಇಲಾಖೆಯಿಂದ ರೈತ ಶಕ್ತಿ ಯೋಜನೆಯಡಿ ಕೃಷಿ ಯಂತ್ರೋಪಕರಣ ಬಳಕೆಗೆ ಪ್ರತಿ ಎಕರೆಗೆ ₹2 50 ರಂತೆ ಗರಿಷ್ಠ 5 ಎಕರೆಗೆ ₹ 1,250 ಡೀಸೆಲ್‌ಗೆ ಸಹಾಯಧನ ನೀಡಲಿದ್ದು, ಆಸಕ್ತರು ಪ್ರೂಟ್ಸ್ ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬಹುದು.

ಪ್ರೂಟ್ಸ್‌ನಲ್ಲಿ ರೈತರ ನೋಂದಣಿಯಾಗದಿದ್ದರೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಖಾತೆ, ಪಹಣಿ ವಿವರ ಮತ್ತು ಜಾತಿ ಪ್ರಮಾಣ ಪತ್ರದೊಂದಿಗೆ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಚೇರಿಯಲ್ಲಿ ಸರ್ವೆ ನಂಬರ್, ಭೂ ಹಿಡುವಳಿ ಸೇರಿಸುವದರೊಂದಿಗೆ ಇದೇ 20ರ ಒಳಗೆ ನೋಂದಾಯಿಸಿಕೊಳ್ಳಬಹುದು ಎಂದು ಜಂಟಿ ಕೃಷಿ ನಿರ್ದೇಶಕರು
ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT