ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ

Last Updated 7 ನವೆಂಬರ್ 2019, 14:17 IST
ಅಕ್ಷರ ಗಾತ್ರ

ಮಾಗಡಿ: ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪಟ್ಟಣದ ಮತದಾರರು ನಿರ್ಧರಿಸಿದ್ದಾರೆ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ರಂಗಧಾಮಯ್ಯ ಹೇಳಿದರು.

ಗುರುವಾರ ಬೆಳಿಗ್ಗೆ ಕಲ್ಯಾಬಾಗಿಲು ಸಾರ್ವಜನಿಕ ವಿನಾಯಕ ಸ್ವಾಮಿಗೆ ಪೂಜೆ ಸಲ್ಲಿಸಿ ಮನೆ, ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರಗಳಿವೆ. ಆಡಳಿತ ಪಕ್ಷದ ಅಭ್ಯರ್ಥಿಗಳು ಪುರಸಭೆಯಲ್ಲಿ ಅಧಿಕಾರಕ್ಕೆ ಬಂದರೆ ಸರ್ಕಾರಗಳಿಂದ ಅಧಿಕ ಅನುದಾನ ತಂದು ಮಾದರಿ ಪಟ್ಟಣವನ್ನಾಗಿಸಲು ಅನುಕೂಲವಾಗಲಿದೆ. ಅಧಿಕಾರವಿಲ್ಲದೆ ಕಂಗಾಲಾಗಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸುವುದರಿಂದ ಪಟ್ಟಣದ ಜನತೆಗೆ ಲಾಭವಿಲ್ಲ. ಬದಲಾಗಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಅವರು ಮನವಿ ಮಾಡಿದರು.

ಬಿಜೆಪಿ ಮುಖಂಡ ಎ.ಎಚ್‌.ಬಸವರಾಜು ಮಾತನಾಡಿ, ‘ಪುರಸಭೆ ಚುನಾವಣೆಯ ಇತಿಹಾಸದಲ್ಲಿ ನಮ್ಮ ಪಕ್ಷದ ಸರ್ವಜನಾಂಗಗಳಿಗೆ ಅವಕಾಶ ಕಲ್ಪಿಸಿದೆ. ದೊಂಬಿದಾಸರಂತಹ ಅಲೆಮಾರಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದೇವೆ. ಪುರಸಭೆ ಅಭಿವೃದ್ಧಿಯಾಗಬೇಕೆಂಬ ಅಭಿಲಾಷೆ ಇದ್ದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲೇ ಬೇಕು’ ಎಂದರು.

ವಿಧಾನ ಪರಿಷತ್‌ ಸದಸ್ಯ ಅ.ದೇವೇಗೌಡ ಮಾತನಾಡಿ, ‘ಪುರಸಭೆ ತೀರಾ ಹಿಂದುಳಿದಿದೆ. ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ’ ಎಂದರು.
ಬಿಜೆಪಿ ಮುಖಂಡರಾದ ಎಂ.ಟಿ.ಶಿವಣ್ಣ, ರಾಘವೇಂದ್ರ ನೇಕಾರ, ದಯಾನಂದ್‌, ಮಾರಪ್ಪ ದೊಂಬಿದಾಸ, ಶಂಕರ್‌, ಭಾಸ್ಕರ್‌, ಬಾಲಾಜಿ, ಗೋಪಾಲ, ಜಗದೀಶ್‌ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದರು.

ಬಿಜೆಪಿ ಅಭ್ಯರ್ಥಿಗಳಾದ ವನಜಾಕ್ಷಿ ಸಿದ್ದರಾಜು, ವೆಂಕಟೇಶ್‌ ಮೂರ್ತಿ, ಚಂದ್ರಶೇಖರ್‌, ಸಂತೋಷ್‌, ಸಿದ್ದಪ್ಪ, ಸುಧಾಮಂಜುನಾಥ್‌, ರಮೇಶ್‌, ಕವಿತಾಪರಶುರಾಮ್‌, ಭಾಗ್ಯಮ್ಮನಾರಾಯಣಪ್ಪ, ಬಸವರಾಜು, ಹನುಮಂತರಾಜು, ಪುಷ್ಪಲಕ್ಷ್ಮಣ್‌, ಮಾರಪ್ಪ, ಲಲಿತಮ್ಮ, ಲಕ್ಷ್ಮಮ್ಮ, ಗಂಗಮ್ಮ, ಗಂಗಾಧರ್‌, ಎಂ.ಜಿ.ಜಯಾನಂದಸ್ವಾಮಿ, ಸೈಯದ್‌ ನಹೀಮುಲ್ಲಾ, ಎಸ್‌.ದೀಪ ಪ್ರಸಾದ್‌, ಲಕ್ಷ್ಮಮ್ಮ ಎಂ.ಟಿ,ಶಿವಣ್ಣ, ಛೋಡಾಭೈ ಪ್ರತಿಯೊಂದು ವಾರ್ಡ್‌ನಲ್ಲಿ ಮತಯಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT