ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ವೃಷಭಾವತಿ ನದಿ ಒಳ ಹರಿವು ಹೆಚ್ಚಳ

Last Updated 26 ಜೂನ್ 2020, 12:39 IST
ಅಕ್ಷರ ಗಾತ್ರ

ಬಿಡದಿ: ಬೆಂಗಳೂರು ನಗರದಲ್ಲಿ ಗುರುವಾರ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದಾಗಿವೃಷಭಾವತಿ ನದಿಯ ಹರಿವು ಹೆಚ್ಚಾಗಿದ್ದು, ಪಟ್ಟಣದ ಸಮೀಪವಿರುವ ವೃಷಭಾವತಿ ಕೆರೆಗೆ ಹೆಚ್ಚಿನ ನೀರು ಹರಿದು ಬಂದಿದೆ.

ರಾಮನಗರ ಜಿಲ್ಲೆಯ ಬಿಡದಿ ಹೋಬಳಿ ಹಾಗೂ ಕನಕಪುರ ತಾಲ್ಲೂಕಿನ ಹಲವು ಗ್ರಾಮಗಳ ಕೃಷಿಗೆ ವೃಷಭಾವತಿಪುರದ ಕೆರೆ ನೀರನ್ನು ಶುದ್ಧೀಕರಿಸಿ ಬಳಸುವ ₹ 100 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದೆ. ನದಿ ನೀರು ಹೆಚ್ಚಾಗಿರುವುದರಿಂದ ಕಾಮಗಾರಿಗೆ ಅಡಚಣೆಯಾಗಿದೆ.

‘ಅಧಿಕ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿದೆ. ಆದರೂ, ಪ್ಲಾಸ್ಟಿಕ್, ಜಂಡು ಮೊದಲಾದ ತ್ಯಾಜ್ಯಗಳೇ ನದಿ ಕಣಿವೆಯಲ್ಲಿ ಹೆಚ್ಚಾಗಿವೆ. ಸುಮಾರು 2.5 ಅಡಿಯಷ್ಟು ನೀರು ಹೊರಹೋಗುತ್ತಿದೆ. ರಾಸಾಯನಿಕ ವಸ್ತುಗಳಿರುವುದರಿಂದ ನೊರೆಯೊಂದಿಗೆ ನದಿ ಉಕ್ಕಿ ಹರಿಯುತ್ತಿದೆ. ನೀರನ್ನು ಶುದ್ಧೀಕರಿಸುವ ಮತ್ತು ನದಿಯ ಪುನರುಜ್ಜೀವನಕ್ಕೆ ಸರ್ಕಾರ ಬೃಹತ್‌ ಯೋಜನೆ ರೂಪಿಸಬೇಕು’ ಎಂದು ಸ್ಥಳೀಯ ನಿವಾಸಿ ಮುನಿಯಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT