ಹಾರೋಹಳ್ಳಿ: ಸಮಾನತೆ ಮತ್ತು ಆತ್ಮ ಗೌರವದ ಜೊತೆಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ಸಮಾನ ಅವಕಾಶ ನೀಡಿದಾಗ ಮಾತ್ರ ರಾಷ್ಟ್ರ ಪ್ರಗತಿ ಸಾಧಿಸಲು ಸಾಧ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿ ಸದಸ್ಯ ಡಾ. ಚಂದ್ರ ಎಂ.(ನಮನ ಚಂದ್ರು) ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರದ ಪ್ರಗತಿಗೆ ಪುರುಷರಷ್ಟೇ ಮಹಿಳೆಯರು ಸಹ ಜವಾಬ್ದಾರರು. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರ ಸೇರಿದಂತೆ ಸರ್ವ ರಂಗಗಳಲ್ಲಿಯೂ ಮಹಿಳೆಯರು ಪ್ರಗತಿ ಸಾಧಿಸಿದಾಗ ಮಾತ್ರ ರಾಷ್ಟ್ರ ಪ್ರಗತಿ ಕಾಣಲು ಸಾಧ್ಯವಾಗುತ್ತದೆ ಎಂದರು.

ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಾಂಸ್ಕೃತಿಕ ಸಮಿತಿ ಆಂತರಿಕ ಗುಣಮಟ್ಟ ಭರವಸಾ ಕೋಶ ಜಂಟಿಯಾಗಿ ಈ ಕಾರ್ಯಕ್ರಮ ಏರ್ಪಡಿಸಿದ್ದವು.

ಶಕ್ತಿ, ಧೈರ್ಯ ಮತ್ತು ಸಹಾನುಭೂತಿಯ ಸಂಕೇತವಾದ ಮಹಿಳೆ ಕುಟುಂಬ ಮತ್ತು ಸಮಾಜವನ್ನು ಕ್ರಿಯಾಶೀಲವಾಗಿ ಪ್ರಗತಿಯತ್ತ ಮುನ್ನಡೆಸುತ್ತಿದ್ದಾಳೆ. ಮಹಿಳೆಗೆ ಸಂವಿಧಾನಬದ್ಧ ಹಕ್ಕು ನೀಡಿ ಸಾಧನೆಗೆ ಪ್ರೋತ್ಸಾಹ ನೀಡಬೇಕು. ಶಿಕ್ಷಣ ಮತ್ತು ಸಮಾನ ಅವಕಾಶ ನೀಡಿ ಗೌರವಿಸಬೇಕು ಎಂದು ಕಾಲೇಜು ಪ್ರಾಂಶುಪಾಲ ಪ್ರೊ.ಕಿಶೋರ ಎಂ. ಅಭಿಪ್ರಾಯಪಟ್ಟರು.

ಮಹಿಳೆಯರ ಹಕ್ಕು, ಸಮಾನತೆ ಹಾಗೂ ಸುರಕ್ಷತೆಯನ್ನು ಕಾನೂನು ಪ್ರಕಾರ ಜಾರಿಗೊಳಿಸಬೆಕು. ಮಹಿಳೆಯರ ನಾಯಕತ್ವ ಗುಣ ಗುರುತಿಸಿ ಪ್ರೋತ್ಸಾಹಿಸಬೇಕು. ಮಹಿಳೆಯರನ್ನು ಎಲ್ಲರೂ ಗೌರವಿಸಿ, ಪ್ರೋತ್ಸಾಹಿಸಬೇಕು ಎನ್ನುವುದೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮೂಲ ಉದ್ದೇಶ ಎಂದು ಬೆಂಗಳೂರು ದಕ್ಷಿಣ ಜಿಲ್ಲೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ನಾಗರತ್ನ ಬಂಜಗೆರೆ ಹೇಳಿದರು.

ಕಲಾವಿದ ವೆಂಕಟಾಚಲ(ಆಕಾಶ್), ಹೆಚ್.ಎಸ್. ಲೋಕೇಶ, ಶೋಭಿತ, ಅಂಬಿಕಾ, ಲಕ್ಷ್ಮಿ, ಪಿ.ಪುನೀತ್ ಸಂಗಡಿಗರು ಜನಪದ ಗೀತ ಗಾಯನ ನಡೆಸಿಕೊಟ್ಟರು.

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ಎಸ್ ಮುರಳಿಧರ್, ಮಿಲಿಯನ್ ಸ್ಟಾರ್ ಸಿಂಗರ್ ನಗೆಮಳೆರಾಜ ಚoದ್ರಾಜ್ ಸಿ, ಸಹಾಯಕ ಪ್ರಾಧ್ಯಾಪಕರಾದ ಡಾ. ಅನಿತಾ ಸಿ. ವಿ , ಡಾ.ಉಮೇಶ್ ಬಿ, ಡಾ. ರವಿಕುಮಾರ್ ಆರ್. ವೇದಿಕೆಯಲ್ಲಿದ್ದರು.

ಡಾ.ಲಕ್ಷ್ಮಮ್ಮ ಎಚ್.ಆರ್, ಡಾ.ಗೀತಾ ಎಸ್.ಆರ್, ಡಾ. ಶೋಭಾ ಎಸ್, ರೂಪಾ ಬಾಯಿ, ಶ್ವೇತಾ, ಟ್ರಸ್ಟ್ ಕಾರ್ಯದರ್ಶಿ ಎಂ ನಾಗೇಶ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.