ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ | 1 ಲಕ್ಷ ಮಾಸ್ಕ್‌ ತಯಾರಿಸಿದ ‘ಕನಕಾಂಬರಿ’

ಮಾದರಿಯಾದ ಮಹಿಳಾ ಒಕ್ಕೂಟ * ನೂರಕ್ಕೂ ಹೆಚ್ಚು ಮಹಿಳೆಯರು ಭಾಗಿ
Last Updated 22 ಏಪ್ರಿಲ್ 2020, 9:00 IST
ಅಕ್ಷರ ಗಾತ್ರ

ಕನಕಪುರ: ಇಲ್ಲಿನ ಕನಕಾಂಬರಿ ಮಹಿಳಾ ಒಕ್ಕೂಟ ಗುಡಿ ಕೈಗಾರಿಕೆ ಉತ್ತೇಜಿಸುವುದರ ಜತೆಗೆ ಕೋವಿಡ್‌–19 ರೋಗ ತಡೆಗಟ್ಟಲು ಬೇಕಿರುವ ಮಾಸ್ಕ್‌ಗಳನ್ನು ತಯಾರಿಸುತ್ತಿದೆ.

ತಯಾರಿಸಿದ ಮಾಸ್ಕ್‌ಗಳನ್ನು ಒಕ್ಕೂಟದ ಸದಸ್ಯರಿಗೆ ಹಾಗೂ ಕೊರೊನಾ ವಿರುದ್ಧಹೋರಾಡುತ್ತಿರುವ ಕೊರೊನಾ ಸೈನಿಕರಿಗೆ ಹಂಚಿಕೆ ಮಾಡಿ ಸಾಮಾಜಿಕ ಜವಬ್ದಾರಿಯನ್ನು ಮೆರೆದಿದೆ. ಒಕ್ಕೂಟವು ‌ ಹಲವು ವರ್ಷಗಳಿಂದ ‌ಮಹಿಳೆಯರಿಗೆ ಉಚಿತ ಹೊಲಿಗೆ ಕೌಶಲ ತರಬೇತಿ ನೀಡುತ್ತಾ ಬಂದಿದೆ. ಇಲ್ಲಿ ತರಬೇತಿ ಪಡೆದ ಮಹಿಳೆಯರೇ ಮಾಸ್ಕ್‌ ಅಭಾವ ಸೃಷ್ಟಿಯಾದಾಗ 1 ಲಕ್ಷ ಮಾಸ್ಕ್‌ ಸಿದ್ಧಪಡಿಸಿದ್ದಾರೆ.

ತಯಾರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಬೆಂಗಳೂರಿನಲ್ಲಿ ಖರೀದಿಸಿ 100ಕ್ಕೂ ಹೆಚ್ಚು ಮಹಿಳೆಯರಿಗೆ ನೀಡಲಾಗಿತ್ತು. ಅವರಿಗೆ ಪ್ರತಿ ಮಾಸ್ಕ್‌ ತಯಾರಿಗೆ ₹ 3 ಪ್ರೋತ್ಸಾಹ ಧನ ನೀಡಲಾಗಿದೆ. ಲಾಕ್‌ಡೌನ್‌ನಿಂದಾಗಿ ಉದ್ಯೋಗವಿಲ್ಲದೆ ಇದ್ದ ಮಹಿಳೆಯ ಜೀವನಕ್ಕೂ ಒಕ್ಕೂಟ ನೆರವಾಗಿದೆ.ಮನೆಗಳಲ್ಲಿ ತಯಾರಾದ ಮಾಸ್ಕ್‌ಗಳನ್ನ ಸಂಗ್ರಹಿಸಿ ಕನಕಪುರದ ಒಕ್ಕೂಟದ ಕಚೇರಿಯಲ್ಲಿ ಪ್ಯಾಕ್‌ ಮಾಡಿ ಜಿಲ್ಲಾಡಳಿತಕ್ಕೂ ನೀಡಲಾಗುತ್ತಿದೆ. ಇದಲ್ಲದೆ, ಆರೋಗ್ಯ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗೆ ಪ್ರತ್ಯೇಕವಾಗಿ 300 ಮಾಸ್ಕ್‌ಗಳನ್ನು ನೀಡಲಾಗುತ್ತಿದೆ.

ನಿತ್ಯ 1 ಸಾವಿರ ಮಾಸ್ಕ್‌ ಹೊಲಿಯುತ್ತಿದ್ದ ಮಹಿಳೆಯರು ಇದೀಗ 10 ಸಾವಿರ ಮಾಸ್ಕ್‌ ತಯಾರಿಸುತ್ತಿದ್ದಾರೆ. ಒಕ್ಕೂಟದ ಸದಸ್ಯರಾಗಿರುವ 6,500 ಕುಟುಂಬಗಳಿಗೆ ತಲಾ 3 ರಿಂದ 4 ಮಾಸ್ಕ್‌ಗಳನ್ನು ಉಚಿತವಾಗಿ ನೀಡಲಾಗಿದೆ. ಅಲ್ಲದೆ, ಗೇರಳ್ಳಿ ಗ್ರಾಮದ 250 ಕುಟುಂಬಗಳಿಗೆ ಮಾಸ್ಕ್‌ ವಿತರಿಸಲಾಗಿದೆ.

‌ಒಕ್ಕೂಟದ ಅಧ್ಯಕ್ಷೆ ಚಿಕ್ಕತಾಯಮ್ಮ, ಕಾರ್ಯದರ್ಶಿ ಕವಿತಾ, ನಿರ್ದೇಶಕಿ ಗಂಗಮ್ಮ, ಕ್ಷೇತ್ರ ವ್ಯವಸ್ಥಾಪಕಿಯರಾದ ಶಶಿಕಲಾ, ಶಾಂತಮ್ಮ, ಶೋಭ, ಸುಮಿತ್ರ, ಅರುಣಿ, ಜಯಲಕ್ಷ್ಮಿ, ಚೂಡಲಿಂಗೇಗೌಡ, ನಾಗರಾಜು,ಎ.ಟಿ.ಲೋಕೇಶ್‌, ವರುಣ್‌ ಮೊದಲಾದವರು ಈ ಮಾಸ್ಕ್‌ ತಯಾರಿಸಿ ವಿತರಿಸುವ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

’ಮಾಸ್ಕ್‌ ಅಭಾವ; ಮಹಿಳೆಯರಿಂದ ಸ್ಪಂದನೆ’:ಕೊರೊನಾ ಬಂದ ಪ್ರಾರಂಭ ದಿನಗಳಲ್ಲಿ ಎಲ್ಲಿ ಕೇಳಿದರೂ, ಕೇಳಿದಷ್ಟು ಹಣ ಕೊಡುತ್ತೇವೆ ಎಂದರೂ ಮಾಸ್ಕ್‌ ದೊರೆಯುತ್ತಿರಲಿಲ್ಲ. ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿಯನ್ನು ಕೊಟ್ಟು ಹೊಲಿಗೆ ಯಂತ್ರವನ್ನು ನೀಡಲಾಗಿದೆ. ಅವರಿಂದ ಮಾಸ್ಕ್‌ ತಯಾರಿಸಿದರೆ ಹೇಗೆ ಎಂಬ ಆಲೋಚನೆ ಬಂತು. ಅದರಂತೆ ನಾವು ಕಾರ್ಯ ನಿರ್ವಹಿಸಲು ಮುಂದಾದೆವು. ಪ್ರಾರಂಭದಲ್ಲಿ ಸ್ವಲ್ಪ ತೊಡುಕುಂಟಾಯಿತು. ಆದರೆ ಈಗ ಚೆನ್ನಾಗಿ ಕೆಲಸ ಮಾಡುತ್ತಿದ್ದು ನಿತ್ಯ 10 ಸಾವಿರ ಮಾಸ್ಕ್‌ ಮಾಡಲಾಗುತ್ತಿದೆ. ₹ 9ಕ್ಕೆ ಮಾರಾಟವನ್ನು ಮಾಡಲಾಗುತ್ತಿದೆ ಎಂದು ಎಚ್‌.ಕೆ.ಶ್ರೀಕಂಠು ಹೇಳಿದರು

‘ಮರುಬಳಕೆ ಮಾಡಬಹುದು’:ಈ ಅಭಿಯಾನದ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರಿಗೂ ಆರ್ಥಿಕ ಪ್ರೋತ್ಸಾಹವನ್ನೂ ನೀಡುವುದಾಗಿದೆ. ಗುಣಮಟ್ಟದ ಮಾಸ್ಕ್‌ ತಯಾರು ಮಾಡುತ್ತಿದ್ದು, ಅವನ್ನು ಸ್ವಚ್ಛಗೊಳಿಸಿ ಮರುಬಳಕೆ ಮಾಡಬಹುದಾಗಿದೆ. ಮೊದಲಿಗೆ ನಮ್ಮ ಒಕ್ಕೂಟದ ಎಲ್ಲಾ ಸದ್ಯರ ಕುಟುಂಬಗಳಿಗೆ ಮನೆ ಮನೆಗೆ ಉಚಿತವಾಗಿ ಮಾಸ್ಕ್‌ಗಳನ್ನು ತಲುಪಿಸುತ್ತಿದ್ದೇವೆ. ಮಾಸ್ಕ್‌ ತಯಾರಿಕೆ ವೇಳೆಯು ಅಂತರ ಕಾಯ್ದುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕಮಾಯಣ್ಣ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT