ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಡರ್‌ಲಾದಲ್ಲಿ ಮಹಿಳಾ ದಿನಾಚರಣೆ

Last Updated 10 ಮಾರ್ಚ್ 2021, 16:03 IST
ಅಕ್ಷರ ಗಾತ್ರ

ರಾಮನಗರ: ಬಿಡದಿಯಲ್ಲಿ ಇರುವ ವಂಡರ್‌ಲಾ ಅಮ್ಯೂಸ್‌ಮೆಂಟ್‌ ಪಾರ್ಕ್‌ನಲ್ಲಿ ಈ ಬಾರಿಯ ಮಹಿಳಾ ದಿನವನ್ನು ವಿಶೇಷವಾಗಿ ಆಚರಿಸಲಾಯಿತು.

ಈ ದಿನದಂದು ಪಾರ್ಕಿಗೆ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶ ನೀಡಲಾಯಿತು. 10 ವರ್ಷ ಮೇಲ್ಪಟ್ಟ ಪುರುಷರಿಗೆ ಪ್ರವೇಶ ಇರಲಿಲ್ಲ. ಬಿಡದಿ ಪಾರ್ಕ್‌ ಜೊತೆಗೆ ಹೈದರಾಬಾದ್ ಮತ್ತು ಕೊಚ್ಚಿಯಲ್ಲಿರುವ ಥೀಮ್ ಪಾರ್ಕ್‌ಗೆ ವಿಭಿನ್ನ ವಯೋಮಾನದ 5 ಸಾವಿರಕ್ಕೂ ಹೆಚ್ಚು ಮಹಿಳೆಯರು ಭೇಟಿ ನೀಡಿದ್ದರು. ಕಂಪೆನಿಯ ಸುರಕ್ಷೆ ಮತ್ತು ಶುಚಿತ್ವದ ಅಂಗವಾಗಿ, ಸವಾರಿಗಳು, ರೆಸ್ಟೋರೆಂಟ್‌ಗಳು, ಕ್ಯೂ ನಿಲ್ಲುವ ಪ್ರದೇಶಗಳು ಮತ್ತು ಕಿಯೋಸ್ಕ್‌ಗಳಲ್ಲಿ ಕೋವಿಡ್‌ ನಿಯಮಾವಳಿಗಳನ್ನು ಅನುಸರಿಸಲಾಯಿತು.

ಪ್ರಸ್ತುತ ವಂಡರ್‌ಲಾ ವಾರದ ಎಲ್ಲಾ ದಿನಗಳಲ್ಲೂ ಬೆಳಿಗ್ಗೆ 11 ರಿಂದ ಸಂಜೆ 6 ವರೆಗೆ ತೆರೆದಿದೆ. ಆನ್‌ಲೈನ್ ಬುಕ್ಕಿಂಗ್ ಪೋರ್ಟಲ್ bookings.wonderla.com ಮೂಲಕ ಮುಂಚಿತವಾಗಿಯೇ ತಮ್ಮ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ. ಮಾಹಿತಿಗಾಗಿ www.wonderla.com ಅಥವಾ 080- 37230300 ಕ್ಕೆ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT