ಬಿಡದಿ: ನಗರದ ಹೊರ ವಲಯದಲ್ಲಿರುವ ವಂಡರ್ಲಾ ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ‘ಗರುಡ ಗ್ಲೈಡ್’ ಎಂಬ ನೂತನ ರೈಡ್ಗೆ ಕ್ರಿಕೆಟ್ ಆಟಗಾರ್ತಿ ಶ್ರೇಯಾಂಕ ಪಾಟೀಲ ಹಾಗೂ ಗೋ ಪ್ರವಾಸ ಸಂಸ್ಥಾಪಕ ‘ಡಾ.ಬ್ರೊ’ ಖ್ಯಾತಿಯ ಗಗನ್ ಶ್ರೀನಿವಾಸ್ ಅವರು ಶುಕ್ರವಾರ ಚಾಲನೆ ನೀಡಿದರು.

ವಂಡರ್ಲಾ ಹಾಲಿಡೇಸ್ನ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಲ್ಲಿ ಮಾತನಾಡಿ, ‘ಗರುಡ ಗ್ಲೈಡ್ ಎಂಬುದು ಅತ್ಯಾಧುನಿಕ ರೋಲರ್ ಕೋಸ್ಟರ್ ಆಗಿದೆ. ಇದನ್ನು ನೆದರ್ಲ್ಯಾಂಡ್ನ ವೆಕೋಮಾ ಸಂಸ್ಥೆ ವಿನ್ಯಾಸಗೊಳಿಸಿದ್ದು, ₹34 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ವಂಡರ್ಲಾ ಬೆಂಗಳೂರಿನಲ್ಲಿ ಈಗ ಎರಡು ಬೃಹತ್ ಇನ್ವರ್ಷನ್ (ತಲೆಕೆಳಗಾಗುವ) ರೋಲರ್ ಕೋಸ್ಟರ್ ರೈಡ್ಗಳನ್ನು (ರಿಕಾಯಿಲ್ ಮತ್ತು ಗರುಡ ಗ್ಲೈಡ್) ಹೊಂದಿದೆ’ ಎಂದು ಮಾಹಿತಿ ನೀಡಿದರು.

‘ಗಾಳಿಯಲ್ಲಿ ತೂಗಾಡುತ್ತಾ ವೇಗದಲ್ಲಿ ಸಾಗುವ ಈ ರೈಡ್, ಪ್ರವಾಸಿಗರಿಗೆ ರೋಚಕ ಅನುಭವ ನೀಡಲಿದೆ. ಈ ರೈಡ್ನ ಅಳವಡಿಕೆ ಮತ್ತು ಸಂಯೋಜನೆಯನ್ನು ವಂಡರ್ಲಾದ ಸ್ವಂತ ಎಂಜಿನಿಯರಿಂಗ್ ತಂಡ ನಿರ್ವಹಿಸಿದೆ. ಇದು ಅತ್ಯುನ್ನತ ಜಾಗತಿಕ ಸುರಕ್ಷತಾ ಮಾನದಂಡಗಳು ಮತ್ತು ನಿಖರತೆಯೊಂದಿಗೆ ಕಾರ್ಯನಿರ್ವಹಿಸುತ್ತದೆ’ ಎಂದು ಮಾಹಿತಿ ನೀಡಿದರು.

ಸಿಒಒ ಧೀರನ್ ಚೌಧರಿ ಹಾಗೂ ವಂಡರ್ಲಾ ಬೆಂಗಳೂರು ಪಾರ್ಕ್ನ ಮುಖ್ಯಸ್ಥ ಎಚ್.ಎಸ್. ರುದ್ರೇಶ್ ಮಾತನಾಡಿ, ‘ಗರುಡ ಗ್ಲೈಡ್ ರೈಡ್ ಸುಮಾರು 662 ಮೀಟರ್ ಉದ್ದದ ಸ್ಟೀಲ್ ಹಳಿಯ ಮೇಲೆ ಗಂಟೆಗೆ 80 ಕಿ.ಮೀ ವೇಗದಲ್ಲಿ ಸಾಗುತ್ತದೆ. 31 ಮೀಟರ್ ಎತ್ತರಕ್ಕೆ ಏರುವ ಸಾಮರ್ಥ್ಯ ಹೊಂದಿದ್ದು, 130 ಸೆಕೆಂಡ್ಗಳ ಪ್ರಯಾಣವು ರೋಚಕತೆಯಿಂದ ಕೂಡಿರಲಿದೆ. ಇಲ್ಲಿ ಎರಡು ರೈಲುಗಳು ಏಕಕಾಲದಲ್ಲಿ ಚಲಿಸುತ್ತವೆ. ಪ್ರತಿಯೊಂದು ರೈಲಿನಲ್ಲಿ 14 ಸವಾರರು ಕುಳಿತುಕೊಳ್ಳಲು ಅವಕಾಶ ಇದೆ’ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-14-1411005355

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.