ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ಮೃತ ಹನುಮಂತ ಪತ್ನಿಗೆ ಕೆಲಸ ನೀಡುವುದಾಗಿ ಸಚಿವರ ಭರವಸೆ

₹5 ಲಕ್ಷ ಪರಿಹಾರ ನೀಡಿದ ಡಾ.ಅಶ್ವತ್ಥ್‌ನಾರಾಯಣ
Last Updated 12 ಮೇ 2020, 10:14 IST
ಅಕ್ಷರ ಗಾತ್ರ

ಕನಕಪುರ: ಅಪಘಾತದಲ್ಲಿ ಮೃತಪಟ್ಟಪಬ್ಲಿಕ್‌ ಟಿ.ವಿ ರಾಮನಗರ ಜಿಲ್ಲಾ ವರದಿಗಾರ ಹನುಮಂತ ಅವರ ಪತ್ನಿಗೆ ಕೆಎಂಎಫ್‌ ಜಿಲ್ಲಾ ಒಕ್ಕೂಟದಲ್ಲಿ ಕೆಲಸ ನೀಡುವುದಾಗಿ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ್‌ನಾರಾಯಣ ಭರವಸೆ ನೀಡಿದರು.

ತಾಲ್ಲೂಕಿನ ಪಡುವಣಗೆರೆ ಗ್ರಾಮದಲ್ಲಿ ಅವರ ಕುಟುಂಬಕ್ಕೆ ವೈಯಕ್ತಿಕವಾಗಿ ₹5ಲಕ್ಷದ ಚೆಕ್‌ ವಿತರಣೆ ಮಾಡಿ ಮಾತನಾಡಿದರು.

ಕುಟುಂಬಕ್ಕೆ ಆಧಾರವಾಗಿದ್ದ ಹನುಮಂತು ಅವರನ್ನು ಕಳೆದುಕೊಂಡು ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಮುಂದಿನ ಭವಿಷ್ಯಕ್ಕಾಗಿ ಪತ್ನಿ ಎನ್‌.ಶಶಿಕಲಾ ಅವರಿಗೆ ಯಾವುದಾದರೂ ಕೆಲಸ ಕೊಡಿಸಬೇಕೆಂದು ಕುಟುಂಬ ಸದಸ್ಯರು ಮನವಿ ಮಾಡಿದರು.

ಇದಕ್ಕೆ ಅವರು, ಕೆಎಂಎಫ್‌ ಅಧ್ಯಕ್ಷರಿಗೆ ಪತ್ರ ಬರೆದು ಜಿಲ್ಲಾ ಹಾಲು ಒಕ್ಕೂಟದಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದರು. ಜತೆಗೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ₹5ಲಕ್ಷ ಪರಿಹಾರ ಹಣ ತ್ವರಿತವಾಗಿ ನೀಡುವುದಾಗಿ ಭರವಸೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್‌, ರಾಮನಗರ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎಸ್‌.ಮುರಳೀಧರ್‌, ಬಿಡದಿ ಪ್ರಾಧಿಕಾರದ ಅಧ್ಯಕ್ಷ ವರದರಾಜುಗೌಡ, ಹಿಂದುಳಿದ ವಿಭಾಗದ ಜಿಲ್ಲಾಧ್ಯಕ್ಷ ನಾಗರಾಜು, ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ್‌ಗೌಡ, ಹೋಬಳಿ ಘಟಕದ ಅಧ್ಯಕ್ಷ ಪ್ರಕಾಶ್‌, ಪರಿಶಿಷ್ಟ ಜಾತಿ ಘಟಕದ ಉಪಾಧ್ಯಕ್ಷ ಕೃಷ್ಣ, ಮುಖಂಡರಾದ ಬಾಲಾಜಿಸಿಂಗ್‌, ನಂಜುಂಡ, ಅಪ್ಪಾಜಿ, ಸುರೇಶ್‌, ವರದರಾಜು, ಶಿವಣ್ಣ, ನಾಗರಾಜು, ಮಹೇಶ್‌ ಇದ್ದರು.

ಪತ್ರಕರ್ತರಿಂದ ಸಹಾಯಧನ: ರಾಮನಗರ ಪತ್ರಕರ್ತರಿಂದ ₹25ಸಾವಿರ ಧನಸಹಾಯ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT