ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಮ್ಮದೇವಿ ಜಾತ್ರೆ ಸಡಗರ

ಸಾಂಸ್ಕೃತಿಕ ಕಲಾ ತಂಡಗಳ ಮೆರುಗು
Last Updated 17 ಫೆಬ್ರುವರಿ 2022, 4:50 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನ ರೇಣುಕಾ ಪೀಠದ ನಾರಾಯಣಗುರು ಮಠದಲ್ಲಿ ಹುಣ್ಣಿಮೆ ಅಂಗವಾಗಿ ಬುಧವಾರ ರೇಣುಕಾ ಯಲ್ಲಮ್ಮದೇವಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಿತು.

ಜಾತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು. ಯಲ್ಲಮ್ಮನ ಗುಡ್ಡದಿಂದ ಬಂದಿದ್ದ ಜೋಗಿತಿಯರು ಯಲ್ಲಮ್ಮದೇವಿಯ ಜನಪದ ಕಥನ ಕಾವ್ಯ ಹಾಡಿದರು. ಬನದ ಹುಣ್ಣಿಮೆ ಅಂಗವಾಗಿ ಚಂಡಿಕಾ ಹೋಮ ನಡೆಯಿತು.

ನಾರಾಯಣಗುರು ಮಠದ ಅಧ್ಯಕ್ಷ ವಿಖ್ಯಾತಾನಂದ ಸ್ವಾಮೀಜಿ ಲೋಕ ಕಲ್ಯಾಣಾರ್ಥ ಚಂಡಿಕಾ ಹೋಮ ನಡೆಸಿದರು. ಕರ್ನಾಟಕ ಆರ್ಯ ಈಡಿಗರ ಸಂಘದ ಎಂ. ತಿಮ್ಮೇಗೌಡ, ಸಂಘದ ಪದಾಧಿಕಾರಿಗಳಾದ ಜೆ.ಪಿ. ಸುಧಾಕರ್‌, ವಾಸನ್‌, ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ. ಗೋಪಾಲ ಈಡಿಗ, ಕುದೂರಿನ ವೆಂಕಟೇಶ್‌ ಈಡಿಗ ಗೌಡ, ಲಕ್ಷ್ಮಣ ದುಷ್ಯಂತ್‌ ಯಲ್ಲಮ್ಮದೇವಿಯ ಜೋಗಿತಿಯರಿಗೆ ಬಾಗಿನ ಅರ್ಪಿಸಿದರು.

ಆರ್ಯ ಈಡಿಗ ಮಹಿಳಾ ಸಂಘದ ಪದಾಧಿಕಾರಿಗಳು, ಭಕ್ತರು ಇದ್ದರು. ಅರ್ಚಕ ಗೋಪಿ ಜೀಯರ್‌ ತಂಡದ ಋತ್ವಿಕರು ಚಂಡಿಕಾ ಹೋಮ ಮತ್ತು ವಿಶೇಷ ಪೂಜೆ ನೆರವೇರಿಸಿದರು.

ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಮತ್ತು ಅರ್ಚಕರು ರಕ್ತದಾನ ಮಾಡಿದರು. ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಕಲಾ ಪ್ರದರ್ಶನ ನೀಡಿದವು. ಯಲ್ಲಮ್ಮ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಮತ್ತು ಅನ್ನದಾಸೋಹ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT