ಸೋಮವಾರ, ಸೆಪ್ಟೆಂಬರ್ 26, 2022
20 °C

ಕನಕಪುರ: ಸದೃಢ ಆರೋಗ್ಯಕ್ಕೆ ಯೋಗ ಅಗತ್ಯ: ಸೃತಿ ಸುಮಂತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ‘ನಿರಂತರ ಯೋಗಾಭ್ಯಾಸದಿಂದ ಆರೋಗ್ಯಯುತ ಜೀವನ ಸಾಗಿಸಲು ಸಾಧ್ಯ. ಎಲ್ಲರೂ ಜೀವನದಲ್ಲಿ ಯೋಗಾಭ್ಯಾಸ  ಅಳವಡಿಸಿಕೊಳ್ಳಬೇಕು’ ಎಂದು ತಾಲ್ಲೂಕು ಪತಂಜಲಿ ಯೋಗ ಸಮಿತಿ ಸಂಚಾಲಕಿ ಸೃತಿ ಸುಮಂತ್‌ ಹೇಳಿದರು.

ಇಲ್ಲಿನ ವಾಣಿ ಟಾಕೀಸ್‌ ಮುಂಭಾಗದ ಆರ್ಯನ್‌ ವರ್ಕ್‌ಶಾಪ್‌ ಆವರಣದಲ್ಲಿ ಮಹರ್ಷಿ ದಯಾನಂದ ಪ್ರಾಣಾಯಾಮ ಯೋಗ ಕೇಂದ್ರದಿಂದ ವಿಶ್ವ ಯೋಗ ದಿನಾಚರಣೆ ಪ್ರಯುಕ್ತವಾಗಿ ಆನ್‌ಲೈನ್‌ ಮೂಲಕ ಆಯೋಜನೆ ಮಾಡಿದ್ದ ಅಂತರರಾಷ್ಟ್ರೀಯ ಯೋಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೋಗ ನಿರೋಧಕ ಶಕ್ತಿ ಹಾಗೂ ಶಾರೀರಿಕ ಮಾನಸಿಕ ಸಮತೋಲನಕ್ಕೆ ಯೋಗ ದಿವೌಷಧವಾಗಿದೆ. ಯಾರಿಗೆ ಮನಸ್ಸಿನ ಮೇಲೆ ಹತೋಟಿ ಇರುತ್ತದೋ, ನಿಯಂತ್ರಣ ಸಾಧಿಸುತ್ತಾರೊ ಅಂತಹವರಿಗೆ ಯಾವ ಸಮಸ್ಯೆಯೂ ಆಗುವುದಿಲ್ಲ. ಕೊರೊನಾ ಸೋಂಕಿಗಿಂತ ಭಯದಿಂದಲೇ ಸತ್ತವರ ಸಂಖ್ಯೆ ಹೆಚ್ಚಿದೆ. ಯೋಗ ಮಾಡುವುದರಿಂದ ಮನಸ್ಸಿನಲ್ಲಿರುವ ಭಯವನ್ನು ನಿವಾರಿಸಬಹುದು ಎಂದು ತಿಳಿಸಿದರು.

ತಾಲ್ಲೂಕು ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಬಾಲಕೃಷ್ಣ ಆರ್ಯ, ಅನಿತಾ ಚೇತನ್‌ ಮತ್ತು ವೆಂಕಟೇಶ್‌ ಯೋಗ ಪ್ರದರ್ಶನ ನಡೆಸಿಕೊಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು