ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನಿಗೆ ಹೆಣ್ಣು ಕೊಡಲು ಕಾಯ್ದೆ ರೂಪಿಸಿ ಎಂದು ಸಚಿವ ಯೋಗೇಶ್ವರ್‌‌ಗೆ ಯುವಕನ ಮನವಿ

Last Updated 18 ಫೆಬ್ರುವರಿ 2021, 14:14 IST
ಅಕ್ಷರ ಗಾತ್ರ

ರಾಮನಗರ: ‘ಯುವ ರೈತರಿಗೆ ಹೆಣ್ಣು ಕೊಡುವಂತೆ ಕಾಯ್ದೆ ರೂಪಿಸಿ’ ಎಂದು ರೈತನೊಬ್ಬ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್‌ಗೆ ಮನವಿ ಮಾಡಿದ್ದು, ಇಬ್ಬರ ನಡುವಿನ ಮೊಬೈಲ್ ಸಂಭಾಷಣೆ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಳವಳ್ಳಿಯ ಪ್ರವೀಣ್ ಎಂಬ ಯುವ ರೈತ ಯೋಗೇಶ್ವರ್‌ಗೆ ಕರೆ ಮಾಡಿದ್ದು, ರೈತರಾದ ಕಾರಣ ತಮ್ಮನ್ನೂ ಒಳಗೊಂಡು ಗ್ರಾಮದ ಯುವಕರಿಗೆ ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾನೆ. ಸುಮಾರು 1ನಿಮಿಷ 40 ಸೆಕೆಂಡ್ ಇರುವ ಸಂಭಾಷಣೆಯಲ್ಲಿ ಈ ಯುವಕ ‘ರೈತನಾದವನಿಗೆ 35 ವರ್ಷ ಕಳೆದರೂ ಹೆಣ್ಣು ಸಿಗುತ್ತಿಲ್ಲ. ಅದೇ ಪಟ್ಟಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರೂ ಅಂತವರಿಗೆ ಹೆಣ್ಣು ಸಿಗುತ್ತಿದೆ. ಹಾಗಾಗಿ ತಮ್ಮ ಸರ್ಕಾರದಲ್ಲಿ ಯಾವುದಾದರೂ ಕಾಯ್ದೆ ಮಾಡಿ ರೈತರನ್ನು ಮದುವೆಯಾಗುವ ಹೆಣ್ಣುಗಳಿಗೆ ಸಹಾಯಧನ ನೀಡುವ ಯೋಜನೆ ಜಾರಿಗೆ ತರಬೇಕು’ ಸಚಿವರಿಗೆ ಬೇಡಿಕೆ ಸಲ್ಲಿಸಿದ್ದಾನೆ.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು ‘ನಿನ್ನ ಬೇಡಿಕೆ ಒಳ್ಳೆಯದು. ಈ ನಿಟ್ಟಿನಲ್ಲಿ ಯೋಚಿಸಬೇಕಾದ ಅನಿರ್ವಾಯತೆ ಇದೆ. ಈ ಬಗ್ಗೆ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT