18ಕ್ಕೆ ರಂಗಗೀತ ಗಾಯನ ವೈಭವ

ಶುಕ್ರವಾರ, ಜೂಲೈ 19, 2019
22 °C

18ಕ್ಕೆ ರಂಗಗೀತ ಗಾಯನ ವೈಭವ

Published:
Updated:

ಶಿವಮೊಗ್ಗ: ಕುವೆಂಪು ರಂಗಮಂದಿರದಲ್ಲಿ ಜೂನ್ 18ರಂದು ಸಂಜೆ 6ಕ್ಕೆ ‘ರಂಗಗೀತ ಗಾಯನ ವೈಭವ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಗಮಕ ಗ್ರಾಮ ಹೊಸಹಳ್ಳಿಯ ಮಧುರ ಕಲಾವೃಂದ ಇಂತಹ ಅಪರೂಪದ ಕಾರ್ಯಕ್ರಮ ಆಯೋಜಿಸಿದೆ. ರಂಗ ಗೀತೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಗಾಯನ ವೈಭವ ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಕಲಾವೃಂದದ ಸದಸ್ಯರೇ ಸೇರಿ ರಂಗಗೀತೆ ಹಾಡುತ್ತಾರೆ. ಇದೊಂದು ಸುಂದರ ಕಾರ್ಯಕ್ರಮ ಎಂದು ಕಲಾವೃಂದದ ಅಧ್ಯಕ್ಷೆ ವಿಜಯಲಕ್ಷ್ಮೀ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಬಣ್ಣಿಸಿದರು.

ಮಧುರ ಕಲಾವೃಂದ ಕಳೆದ ಆರೇಳು ವರ್ಷಗಳಿಂದ ಶಿವಮೊಗ್ಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ವಿಶೇಷವಾಗಿ ಇದು ಮಹಿಳೆಯರೇ ಸೇರಿಕೊಂಡು ಕಟ್ಟಿರುವ ಕಲಾತಂಡ ಎಂದು ವಿವರ ನೀಡಿದರು.

ಕಲಾವೃಂದದ ಪ್ರಧಾನ ಕಾರ್ಯದರ್ಶಿ ಸಿ.ಕೆ.ನಾಗರತ್ನಾ ಸುರೇಶ್ ಮಾತನಾಡಿ, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಕಾರ್ಯಕ್ರಮ ಉದ್ಘಾಟಿಸುವರು.

ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಬಸವ ಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ, ಗಾಯಕಿ ಬಿ.ಜಯಶ್ರೀ, ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಉಪಸ್ಥಿತರಿರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜಾರಾಮಮೂರ್ತಿ, ಪುಷ್ಪಾ ಹಾಲಪ್ಪ, ಅರುಣಾ ಪ್ರಕಾಶ್, ಜ್ಯೋತಿ, ಸವಿತಾ, ಪ್ರತಿಭಾ ರಾಣಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !