ಸಮುದಾಯದ ಕನಸುಗಳಾಗಿಸುವ ಕಲೆಯೇ ನಾಟಕ

ಭಾನುವಾರ, ಜೂನ್ 16, 2019
26 °C
ರಂಗಾಯಣದ ರೆಪರ್ಟರಿ ‘ರಂಗತೇರು’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಚಿಂತಕ ಡಿ.ಎಸ್.ನಾಗಭೂಷಣ್

ಸಮುದಾಯದ ಕನಸುಗಳಾಗಿಸುವ ಕಲೆಯೇ ನಾಟಕ

Published:
Updated:
Prajavani

ಶಿವಮೊಗ್ಗ: ವ್ಯಕ್ತಿಗತ ಕನಸುಗಳನ್ನು ಸಮುದಾಯದ ಕನಸುಗಳಾಗಿ ಪರಿವರ್ತಿಸುವ ಕಲೆಯೇ ನಾಟಕ ಎಂದು ರಂಗ ವಿಮರ್ಶಕ ಹಾಗೂ ಸಮಾಜವಾದಿ ಚಿಂತಕ ಡಿ.ಎಸ್.ನಾಗಭೂಷಣ್ ಬಣ್ಣಿಸಿದರು.

ಸುವರ್ಣ ಸಂಸ್ಕೃತಿ ಭವನದಲ್ಲಿ ರಂಗಾಯಣದ ರೆಪರ್ಟರಿ ರಂಗತೇರಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕಲಾವಿದರು ತಮ್ಮ ಮಿತಿಗಳನ್ನು ಮೀರಿ ಸಮಾಜದ ಜತೆ ಬೆರೆಯಬೇಕು. ಹಾಗೆ ಬೆರೆತಾಗ ನಟನೆ ಅರ್ಥಪೂರ್ಣವಾಗಿ ಜನರ ಹೃದಯ ತಲುಪಲು ಸಾಧ್ಯವಾಗುತ್ತದೆ. ಸಮಾಜಕ್ಕೆ ತಿಳಿವಳಿಕೆ ಮೂಡಿಸುವ ಶಕ್ತಿ ಕಲೆ ಸಾಹಿತ್ಯಕ್ಕೆ ಇದೆ. ಅಂಥ ಶಕ್ತಿಯನ್ನು ಸಮಾಜ ಎಷ್ಟರಮಟ್ಟಿಗೆ ಸದುಪಯೋಗಪಡಿಸಿಕೊಂಡಿದೆ ಎಂಬ ಅರಿವಿಲ್ಲ. ಭೀಕರ ವಾಸ್ತವಗಳಿಂದ ತಪ್ಪಿಸಿಕೊಳ್ಳುವ ಮನುಷ್ಯ ಪ್ರಯತ್ನದ ಕಾರಣಗಳಿಂದಲೇ ಕಲೆ, ಸಾಹಿತ್ಯಕ್ಕೆ ವಿಶೇಷ ಪ್ರಾಮುಖ್ಯತೆ ದೊರೆತಿದೆ. ಈ ಸಂಗತಿ ಸರಿಯಾಗಿ ಅರ್ಥ ಮಾಡಿಕೊಂಡರೆ ಬದಲಾವಣೆಯ ಕ್ರಾಂತಿ ಮನದಲ್ಲಿ ಹೆಮ್ಮರವಾಗುತ್ತದೆ. ಭವಿಷ್ಯದಲ್ಲಿ ಉತ್ತಮ ಫಲಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.

ನಾಟಕ ಪ್ರದರ್ಶನಕ್ಕೆ ತೆರಳುವ ಕಲಾವಿದರು ಎಲ್ಲಾ ಸ್ಥಳಗಳ ಜನರ ಹಾವ–ಭಾವ, ಅಲ್ಲಿನ ಆಚರಣೆ, ಭಾಷೆ, ಬದುಕು ಇತರೆ ವಿಷಯ ಕಲಿಯಬೇಕು. ನಾಟಕ ಪ್ರದರ್ಶಿಸುವ ಊರುಗಳನ್ನು ತಮ್ಮ ದೇ ಊರು ಎಂದು ಭಾವಿಸಬೇಕು. ಆಗ ಒಬ್ಬ ಕಲಾವಿದ ಪರಿಪೂರ್ಣನಾಗಲು ಸಾಧ್ಯ ಎಂದರು.

ರಾಜ್ಯದ ವಿವಿಧ ಭಾಗಗಳ ರಂಗಾಯಣಗಳು ಶಿವಮೊಗ್ಗ ರಂಗಾಯಣದಷ್ಟು ಕ್ರಿಯಾಶೀಲವಾಗಿ ರಂಗ ಪಯಣದದಲ್ಲಿ ತೊಡಗಿಸಿಕೊಂಡಿಲ್ಲ. ಇದು ನಿರ್ದೇಶಕ ಎಂ. ಗಣೇಶ್, ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಹಾಗೂ ರಂಗ ವಿದ್ಯಾರ್ಥಿಗಳ ಶ್ರಮದ ಫಲ ಎಂದು ಶ್ಲಾಘಿಸಿದರು.

ರಂಗಾಯಣ ನಿರ್ದೇಶಕ ಡಾ.ಎಂ ಗಣೇಶ್ ಮಾತನಾಡಿ, ರಂಗತೇರು ರಾಜ್ಯದಾದ್ಯಂತ 7 ಸಾವಿರ ಕಿ.ಮೀ. ಕ್ರಮಿಸಲಿದೆ. ‘ಗೌರ್ನಮೆಂಟ್‌ ಬ್ರಾಹ್ಮಣ’ ‘ಇದಕ್ಕೆ ಕೊನೆ ಎಂದು..?’ ‘ಮೆರವಣಿಗೆ’ ‘ಟ್ರಾನ್ಸ್‌ನೇಷನ್’ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ವಿವರ ನೀಡಿದರು.

‘ಕಲಾವಿದರು’ ಒಕ್ಕೂಟದ ಖಜಾಂಚಿ ಆರ್.ಎಸ್‌.ಹಾಲಸ್ವಾಮಿ, ರೈತ ಮುಖಂಡ ಕೆ.ಟಿ.ಗಂಗಾಧರ್, ಸಾಹಿತಿ ಶ್ರೀಕಂಠ ಕೂಡಿಗೆ, ಅಂಕಣಕಾರ ಬಿ.ಚಂದ್ರೇಗೌಡ ಉಪಸ್ಥಿತರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !