ಅತ್ಯಾಚಾರ ಪ್ರಕರಣ: ಲೆನಿನ್‌ ಗೌಪ್ಯ ವಿಚಾರಣೆ

7

ಅತ್ಯಾಚಾರ ಪ್ರಕರಣ: ಲೆನಿನ್‌ ಗೌಪ್ಯ ವಿಚಾರಣೆ

Published:
Updated:

ರಾಮನಗರ: ಬಿಡದಿ ಧಾನ್ಯಪೀಠದ ನಿತ್ಯಾನಂದ ಸ್ವಾಮೀಜಿ ಮತ್ತು ಅವರ ಶಿಷ್ಯರ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ದೂರುದಾರಾಗಿರುವ ಸ್ವಾಮೀಜಿಯ ಮಾಜಿ ಕಾರು ಚಾಲಕ ಲೆನಿನ್‌ ಕುರುಪ್ಪನ್‌ರ ಗೌಪ್ಯ ವಿಚಾರಣೆಯು ಇಲ್ಲಿನ ಮೂರನೇ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಬುಧವಾರ ನಡೆಯಿತು.

ಇನ್ ಕ್ಯಾಮೆರಾ ಪ್ರಕ್ರಿಯೆ ಮೂಲಕ ನ್ಯಾಯಾಧೀಶ ಗೋಪಾಲಕೃಷ್ಣ ರೈ ಅವರು ಸಾಕ್ಷಿಯ ಹೇಳಿಕೆಯನ್ನು ದಾಖಲಿಸಿಕೊಂಡರು. ಬೆಳಿಗ್ಗೆಯಿಂದ ಸಂಜೆಯವರೆಗೂ ವಿಚಾರಣೆ ನಡೆದಿತ್ತು. ಸಾಕ್ಷ್ಯ ದಾಖಲು ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ನ್ಯಾಯಾಧೀಶರು ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಿದರು.

ನಿತ್ಯಾನಂದಗೆ ಎಚ್ಚರಿಕೆ: ಪ್ರಕರಣದ ಮೊದಲ ಆರೋಪಿಯಾಗಿರುವ ನಿತ್ಯಾನಂದ, ಮೂರನೇ ಆರೋಪಿ ಧನಶೇಖರನ್‌ ಹಾಗೂ ಐದನೇ ಆರೋಪಿ ರಾಗಿಣಿ ಇಂದಿನ ವಿಚಾರಣೆಗೆ ಗೈರಾಗಿದ್ದರು. ಆರೋಪಿಗಳು ಪದೇ ಪದೇ ಗೈರಾಗುತ್ತಿರುವ ಕುರಿತು ಸಿಐಡಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ಕೂಡಲೇ ನ್ಯಾಯಾಲಯಕ್ಕೆ ಕರೆಸುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿದರು. ಮುಂದಿನ ವಿಚಾರಣೆಗೆ ತಪ್ಪದೇ ಹಾಜರಾಗುವಂತೆ ನ್ಯಾಯಾಧೀಶರು ಎಚ್ಚರಿಕೆ ನೀಡಿದರು.

‘2014ರಲ್ಲಿ ಸೆಷನ್‌ ಕೋರ್ಟ್‌ನಲ್ಲಿ ವಿಚಾರಣೆ ಆರಂಭವಾದ ಬಳಿಕ ಮಧ್ಯಂತರ ಆದೇಶಗಳನ್ನು ಪ್ರಶ್ನಿಸಿ ಆರೋಪಿಗಳು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ನಡೆಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಅದರಂತೆ ವಿಚಾರಣೆಯು ಚುರುಕಾಗಿ ನಡೆದಿದೆ’ ಸಿಐಡಿ ಪರ ವಕೀಲ ಎಸ್. ವಡವಡಗಿ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !