ಸೋಮವಾರ, ನವೆಂಬರ್ 18, 2019
25 °C

ಹೆಗ್ಗಣ ಕಚ್ಚಿ ಹಸುಗೂಸು ಸಾವು

Published:
Updated:

ಸಿಂದಗಿ(ವಿಜಯಪುರ): ಮನೆಯಲ್ಲಿ ಮಲಗಿದ್ದ 5 ತಿಂಗಳ ಹಸುಗೂಸಿಗೆ ಹೆಗ್ಗಣ ಕಚ್ಚಿ ಮೃತಪಟ್ಟ ಘಟನೆ ತಾಲ್ಲೂಕಿನ ಗೋಲಗೇರಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಮಧ್ಯರಾತ್ರಿ ವೇಳೆ ವಿದ್ಯುತ್ ಸಂಪರ್ಕ ಇಲ್ಲದ ಸಂದರ್ಭದಲ್ಲಿ, ದಂಪತಿ ಮಗ್ಗುಲಲ್ಲಿ ಮಲಗಿದ್ದ ಮಗುವಿನ ಬಲಗಾಲಿಗೆ ಹೆಗ್ಗಣ ಕಚ್ಚಿ ಎಳೆದಾಡಿದೆ. ಮಗು ಬೋರಲು ಬಿದ್ದು ಉಸಿರುಗಟ್ಟಿ ಮೃತಪಟ್ಟಿದೆ ಎನ್ನಲಾಗಿದೆ.

ಇಟ್ಟಿಗೆ ತಯಾರಿಕಾ ಘಟಕದಲ್ಲಿ ಕೂಲಿಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಸುರಗಿಹಳ್ಳಿ ಗ್ರಾಮದ ಗೀತಾ ಹಾಗೂ ಗೋಲಪ್ಪ ಮಾದರ ದಂಪತಿಯ ಚೊಚ್ಚಲ ಮಗು ಇದಾಗಿತ್ತು. ತವರು ಮನೆಗೆ ಹಬ್ಬಕ್ಕೆಂದು ಬಂದಾಗ ಈ ಅವಘಡ ಸಂಭವಿಸಿದೆ.

ಪ್ರತಿಕ್ರಿಯಿಸಿ (+)