1600 ಶುಶ್ರೂಷಕಿಯರ ನೇಮಕ ಶೀಘ್ರ

7

1600 ಶುಶ್ರೂಷಕಿಯರ ನೇಮಕ ಶೀಘ್ರ

Published:
Updated:

ಆಲಮಟ್ಟಿ (ವಿಜಯಪುರ):  ‘ರಾಜ್ಯದಲ್ಲಿ 1600 ಶುಶ್ರೂಷಕಿಯರ ನೇಮಕಾತಿ ಪ್ರಸ್ತಾವನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಶೀಘ್ರವೇ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು.

‘600 ಎಂಬಿಬಿಎಸ್‌ ವೈದ್ಯರು, 70 ಡ್ರಗ್‌ಇನ್ಸ್‌ಪೆಕ್ಟರ್‌, 30 ವೈಜ್ಞಾನಿಕ ಪರಿಶೀಲಕರ (ಸೈಂಟಿಫಿಕ್‌ ಅನಾಲಿಸಿಸ್ಟ್‌) ಹುದ್ದೆಗೂ ನೇಮಕಾತಿ ನಡೆಯಲಿದೆ’ ಎಂದು ಶನಿವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಎಲ್ಲಿ ವೈದ್ಯರ ಕೊರತೆಯಿದೆಯೋ, ಶಿಶು ಮರಣ ಸಂಖ್ಯೆ ಹೆಚ್ಚಿದೆಯೋ ಅಲ್ಲಿಗೆ ತಜ್ಞ ವೈದ್ಯರನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ. ಕೌನ್ಸೆಲಿಂಗ್‌ ಮೂಲಕ ವೈದ್ಯರ ಅಗತ್ಯವಿರುವೆಡೆ ಸೇವೆ ಸಲ್ಲಿಸಲು ಅನುಕೂಲ ಕಲ್ಪಿಸಲಾಗುವುದು’ ಎಂದರು.

‘ಬಿಪಿಎಲ್ ಕಾರ್ಡ್‌ ಹೊಂದಿರುವವರು ಯಾವುದೇ ಕಾರ್ಡ್‌ ಇಲ್ಲದೇ ಆರೋಗ್ಯ ಸೇವೆಯನ್ನು ಉಚಿತವಾಗಿ ಪಡೆಯಬಹುದು. ಇದಕ್ಕೂ ಮೊದಲು ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯವಿಲ್ಲದ ಸೇವೆ ಬಗ್ಗೆ ಆಯಾ ತಜ್ಞ ವೈದ್ಯರ ಶಿಫಾರಸಿನ ಮೇರೆಗೆ, ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಬಹುದು. ಇದಕ್ಕಾಗಿ ಪ್ರತ್ಯೇಕ ಆರೋಗ್ಯ ಕಾರ್ಡ್‌ ಅಗತ್ಯವಿಲ್ಲ’ ಎಂದು ಹೇಳಿದರು.

‘ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ಗೆ ವಿದ್ಯುತ್‌ ತೊಂದರೆಯಾಗದಂತೆ ಜನರೇಟರ್ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಇದೇ ಸಂದರ್ಭ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !