ಸೋಮವಾರ, ಸೆಪ್ಟೆಂಬರ್ 20, 2021
29 °C
ಹೊನ್ನೇಸರ ಗ್ರಾಮಸ್ಥರ ಕಾರ್ಯಕ್ಕೆ ಕೈಜೋಡಿಸಿದ ಜಿಲ್ಲಾಧಿಕಾರಿ

ಕೆರೆ ಜೀರ್ಣೋದ್ಧಾರಕ್ಕೆ ಮರುಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ತಾಲ್ಲೂಕಿನ ಹೊನ್ನೇಸರ ಗ್ರಾಮದ ವಿರೂಪಾಕ್ಷನ ಜಡ್ಡು ಕೆರೆಯ ಜೀರ್ಣೋದ್ಧಾರ ಕಾರ್ಯಕ್ಕೆ ಗ್ರಾಮಸ್ಥರು ಮರು ಚಾಲನೆ ನೀಡಿದ್ದು, ಸೋಮವಾರ ಆರಂಭಗೊಂಡ ಶ್ರಮದಾನದಲ್ಲಿ ಜಿಲ್ಲಾಧಿಕಾರಿ ಕೆ.ದಯಾನಂದ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಮಲೆನಾಡಿನ ಭಾಗದಲ್ಲೂ ಕುಡಿಯುವ ನೀರಿಗೆ ತೊಂದರೆ ಉಂಟಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತಿದೆ. ಜಿಲ್ಲೆಯ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ಉಂಟಾಗಿದೆಯೋ ಅಂತಹ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಸೂಚನೆ ನೀಡಲಾಗಿದೆ’ ಎಂದರು.

‘ಕೆರೆ–ಕಟ್ಟೆ ಸೇರಿದಂತೆ ಜಲಮೂಲಗಳನ್ನು ನಿರ್ಲಕ್ಷಿಸಿದ್ದರಿಂದ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಈಗಲೂ ನಮ್ಮ ಸುತ್ತಮುತ್ತ ಇರುವ ಕೆರೆಗಳಲ್ಲಿ ತುಂಬಿರುವ ಹೂಳನ್ನು ತೆಗೆಯುವ ಮೂಲಕ ಅವುಗಳಿಗೆ ಪುನರುಜ್ಜೀವ ನೀಡಿದರೆ ನೀರಿಗೆ ಸಂಬಂಧಿಸಿ ನಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು’ ಎಂದು ಹೇಳಿದರು.

‘ಕೆರೆಯ ಜೀರ್ಣೋದ್ಧಾರದಂತಹ ಕೆಲಸಕ್ಕೆ ಆಯಾ ಪ್ರದೇಶದ ಜನರ, ಸಂಘ ಸಂಸ್ಥೆಗಳ ಸಹಭಾಗಿತ್ವ ಅತ್ಯಗತ್ಯ. ಕೇವಲ ಸರ್ಕಾರದ ಸಹಾಯದಿಂದಲೇ ಈ ಕೆಲಸ ಸಂಪೂರ್ಣವಾಗಿ ಆಗುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ನೀರಿನ ವಿಷಯದಲ್ಲಿ ಜಾಗೃತಿಯೊಂದೇ ನಮ್ಮನ್ನು ಎಚ್ಚರವಾಗಿಡಬಲ್ಲದು’ ಎಂದರು.

ಚರಕ ಸಂಸ್ಥೆಯ ಪ್ರಸನ್ನ, ‘ಐತಿಹಾಸಿಕ ಹಿನ್ನೆಲೆ ಹೊಂದಿರುವ ವಿರೂಪಾಕ್ಷನ ಜಡ್ಡು ಕೆರೆ ಜೀರ್ಣೋದ್ಧಾರಕ್ಕೆ ಕಳೆದ ವರ್ಷವೇ ಚಾಲನೆ ನೀಡಲಾಗಿತ್ತು. ಈ ಕೆಲಸಕ್ಕೆ ಸರ್ಕಾರದ ನೆರವಿನ ಜೊತೆಗೆ ದಾನಿಗಳೂ ಕೈಜೋಡಿಸಿದ್ದರು. ಕಳೆದ ವರ್ಷ ಹೂಳು ತೆಗೆದ ಪರಿಣಾಮವಾಗಿ ಸುತ್ತಮುತ್ತಲ ನಿವಾಸಿಗಳಿಗೆ ಹಲವು ರೀತಿಯ ಪ್ರಯೋಜನಗಳಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.