ಆಡಳಿತ ಮಂಡಳಿ ಆಯ್ಕೆ ಪಟ್ಟಿಗೆ ತಡೆಯಾಜ್ಞೆ

7

ಆಡಳಿತ ಮಂಡಳಿ ಆಯ್ಕೆ ಪಟ್ಟಿಗೆ ತಡೆಯಾಜ್ಞೆ

Published:
Updated:

ಚನ್ನಪಟ್ಟಣ: ಚನ್ನಪಟ್ಟಣ ಇನ್ ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್‌ನ ಪ್ರಸಕ್ತ ಸಾಲಿನ ಆಡಳಿತ ಮಂಡಳಿ ಆಯ್ಕೆಗೆ ಇಲ್ಲಿನ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಕ್ಲಬ್‌ನ ಆಡಳಿತ ಮಂಡಳಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಟಿ.ಕೆ.ಯೋಗೀಶ್, ಕಾರ್ಯದರ್ಶಿ ಅಜಯ್ ಕುಮಾರ್ ಸೇರಿದಂತೆ 16ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆ ಪ್ರೇಮಾನಂದ್ ಕಾರ್ಯನಿರ್ವಹಿಸಿದ್ದರು.

ಈ ಆಯ್ಕೆ ಸಕ್ರಮವಾಗಿಲ್ಲ ಎಂದು ಚುನಾಯಿತ ಪ್ರತಿನಿಧಿಗಳು ಮತ್ತು ಚುನಾವಣಾಧಿಕಾರಿ ಪ್ರೇಮಾನಂದ್ ವಿರುದ್ಧ ಕ್ಲಬ್‌ನ ಸದಸ್ಯ ಎಚ್.ಮಂಜುನಾಥ್ ನೇತೃತ್ವದಲ್ಲಿ 16ಮಂದಿ ಕ್ಲಬ್ ಸದಸ್ಯರು ಪಟ್ಟಣದ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಚುನಾವಣೆಯಲ್ಲಿ ಸಂಘದ ಬೈಲಾ ನಿಯಮ ಗಾಳಿಗೆ ತೂರಲಾಗಿದೆ. ಸಂಘದ ಎಲ್ಲಾ ಸದಸ್ಯರು ಸ್ಪರ್ಧಿಸಲು ಅವಕಾಶ ನೀಡದೆ ಕೆಲವೇ ಕೆಲವು ಮಂದಿ ಸ್ಪರ್ಧಿಸಲು ಅನುಕೂಲ ಮಾಡಿಕೊಡಲಾಗಿದೆ. ಇತರ ಸದಸ್ಯರೆಲ್ಲರನ್ನೂ ಕಡೆಗಣಿಸಲಾಗಿದೆ. ಈ ಚುನಾವಣೆ ರದ್ದು ಪಡಿಸಬೇಕು. ಆಡಳಿತ ಮಂಡಳಿ ಸದಸ್ಯರು ಯಾವುದೇ ಅಧಿಕಾರ ಚಲಾಯಿಸದ ರೀತಿಯಲ್ಲಿ ತಡೆಯಾಜ್ಞೆ ನೀಡಬೇಕು ಎಂದು ಒತ್ತಾಯಿಸಿದ್ದರು.

ಅರ್ಜಿದಾರರ ವಾದ ಪುರಸ್ಕರಿಸಿರುವ ಚನ್ನಪಟ್ಟಣ ಸಿವಿಲ್ ನ್ಯಾಯಾಲಯ ಅಕ್ಟೋಬರ್ 9 ರಂದು ಆದೇಶ ನೀಡಿ, ಚುನಾವಣಾಧಿಕಾರಿ ಪ್ರಕಟಿಸಿರುವ ಆಡಳಿತ ಮಂಡಳಿ ಆಯ್ಕೆ ಪಟ್ಟಿಗೆ ತಡೆಯಾಜ್ಞೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !