20ಕ್ಕೆ ನಿವೃತ್ತ ನೌಕರರ ಸಂಘದ ಮಹಾಸಭೆ

7

20ಕ್ಕೆ ನಿವೃತ್ತ ನೌಕರರ ಸಂಘದ ಮಹಾಸಭೆ

Published:
Updated:

ಶಿವಮೊಗ್ಗ: ಜಿಲ್ಲಾ ನಿವೃತ್ತ ನೌಕರರ ಸಂಘದ 2017-18ನೇ ಸಾಲಿನ ವಾರ್ಷಿಕ ಮಹಾಸಭೆ ಆ. 20ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ.

ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ನಡೆಯುವ ಮಹಾಸಭೆಯಲ್ಲಿ ಹಿರಿಯ ಸದಸ್ಯರನ್ನು ಸನ್ಮಾನಿಸಲಾಗುವುದು. 75 ವರ್ಷ ತುಂಬಿದ ಮತ್ತು ಸಂಘದ ಸದಸ್ಯರಾಗಿ 5 ವರ್ಷ ಪೂರೈಸಿದ ಎಲ್ಲರನ್ನೂ ಸನ್ಮಾನಿಸಲಾಗುತ್ತದೆ. ಅರ್ಹರ ಪಟ್ಟಿ ಸಂಘದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್. ಹನುಮಂತಪ್ಪ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಸುಮಾರು 10 ಸಾವಿರಕ್ಕೂ ನಿವೃತ್ತ ಸರ್ಕಾರಿ ನೌಕರರು ಇದ್ದಾರೆ. ಆದರೆ, ಸಂಘದ ಸದಸ್ಯತ್ವ ಪಡೆದವರು 4,200 ನಿವೃತ್ತರು. ಉಳಿದವರು ಸದಸ್ಯತ್ವ ಪಡೆದಿಲ್ಲ. ಎಲ್ಲರೂ ಸದಸ್ಯತ್ವ ಪಡೆದರೆ ಹೋರಾಟಕ್ಕೆ ಬಲ ಬರುತ್ತದೆ ಎಂದರು.

ಮಹಾಸಭೆಯಲ್ಲಿ 3 ವರ್ಷದ ಅವಧಿಗೆ 9 ಮಂದಿ ನೂತನ ನಿರ್ದೆಶಕರನ್ನು ಆಯ್ಕೆ ಮಾಡಲಾಗುವುದು. ಆಡಳಿತ ಮಂಡಳಿ ನಿರ್ದೇಶಕರಾಗಲು ಇಚ್ಚಿಸುವವರು  ಸಂಘದ ಕಾರ್ಯಾಲಯದಲ್ಲಿ ಅರ್ಜಿ ಪಡೆದು ಆ. 9ರ ಒಳಗೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಸವರಾಜಪ್ಪ ಪಿ. ಕಂದಗಲ್, ಪ್ರಧಾನ ಕಾರ್ಯದರ್ಶಿ ಟಿ.ಎ. ಶರಣಪ್ಪ, ಖಜಾಂಚಿ ಎ. ಮಾಯಪ್ಪ, ನಿರ್ದೇಶಕರಾದ ಭಗವಂತರಾವ್, ಬಿ.ಜಿ. ಚಂದ್ರಪ್ಪ, ಸಿ. ರಾಮಚಂದ್ರ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !