ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕಾರಿಪುರಕ್ಕೆ ₹2,000 ಕೋಟಿ ಮಂಜೂರು’

Last Updated 20 ಆಗಸ್ಟ್ 2019, 19:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮುಖ್ಯಮಂತ್ರಿಯಾದ 20 ದಿನಗಳಲ್ಲೇ ಯಡಿಯೂರಪ್ಪ ಅವರು ಶಿಕಾರಿಪುರಕ್ಕೆ ₹2,000 ಕೋಟಿ ಮೊತ್ತದ ಯೋಜನೆಗಳನ್ನು ಮಂಜೂರು ಮಾಡಿದ್ದಾರೆ. ಆದರೆ, ಉತ್ತರ ಕರ್ನಾಟಕದ ಪ್ರವಾಹ ಪರಿಹಾರಕ್ಕೆ ಹಣವಿಲ್ಲ ಎನ್ನುತ್ತಿದ್ದಾರೆ’ ಎಂದು ಜೆಡಿಎಸ್‌ ಶಾಸಕ ಎಚ್.ಡಿ. ರೇವಣ್ಣ ಟೀಕಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಚ್.ಡಿ. ಕುಮಾರಸ್ವಾಮಿ ಅವರದ್ದು ಹಾಸನ, ಮಂಡ್ಯ ಬಜೆಟ್ ಎಂದು ಟೀಕಿಸುತ್ತಿದ್ದರು. ಈಗ ಶಿಕಾರಿಪುರಕ್ಕೆ ಹಣ ಕೊಟ್ಟಿರುವುದನ್ನು ಯಾವ ಬಜೆಟ್‌ ಅನ್ನಬೇಕು’ ಎಂದು ಪ್ರಶ್ನಿಸಿದರು.

‘ದೇವದುರ್ಗದಲ್ಲಿ ಆಪರೇಷನ್‌ ಕಮಲಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ನಡೆಸಿದ್ದ ಟೆಲಿಫೋನ್ ಸಂಭಾಷಣೆ ವಿಚಾರವನ್ನು ಎಸ್‌ಐಟಿಗೆ ಕೊಡಬೇಡಿ. ಇದು ದ್ವೇಷ ರಾಜಕಾರಣಕ್ಕೆ ಕಾರಣವಾಗುತ್ತದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಅವರೇ ಖುದ್ದು ಭೇಟಿಯಾಗಿ ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಮಾಡಿರಲಿಲ್ಲ. ಈಗ ಅವರು ಟೆಲಿಫೋನ್‌ ಕದ್ದಾಲಿಕೆ ವಿಷಯದಲ್ಲಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ತನಿಖೆ ಮಾಡಲಿ ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ದೇವೇಗೌಡರ ಕುಟುಂಬಕ್ಕೆ ತನಿಖೆ ಹೊಸದಲ್ಲ’ ಎಂದು ಸವಾಲು ಹಾಕಿದರು.

‘ಓಡಿಶಾಕ್ಕೆ ಸ್ಥಳದಲ್ಲಿಯೇ ಕೇಂದ್ರ ಸರ್ಕಾರ ₹1,000 ಕೋಟಿ ಪರಿಹಾರ ಘೋಷಿಸಿತ್ತು. ಆದರೆ, ರಾಜ್ಯಕ್ಕೆ ಇಲ್ಲಿಯವರೆಗೆ ಬಿಡಿಗಾಸೂ ನೀಡಿಲ್ಲ. 25 ಸಂಸದರನ್ನು ಆಯ್ಕೆ ಮಾಡಿದರೂ ಬಿಜೆಪಿ ರಾಜ್ಯವನ್ನು ನಿರ್ಲಕ್ಷಿಸುತ್ತಿದೆ’ ಎಂದು ಟೀಕಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT