ರೋಟರಿ ಪದಗ್ರಹಣ ಸಮಾರಂಭ

ಶುಕ್ರವಾರ, ಜೂಲೈ 19, 2019
23 °C

ರೋಟರಿ ಪದಗ್ರಹಣ ಸಮಾರಂಭ

Published:
Updated:

ಶಿವಮೊಗ್ಗ: ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಜುಲೈ 3ರ ಸಂಜೆ 5.30ಕ್ಕೆ ರೋಟರಿ ಕ್ಲಬ್, ಇನ್ನರ್‌ವ್ಹೀಲ್ ಕ್ಲಬ್‌ಗಳ 2019–-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಮಹಿಳೆಯರಿಗೆ ಅಧ್ಯಕ್ಷ ಸ್ಥಾನ ನೀಡಿರುವ ಕಾರಣ ಈ ಬಾರಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದು ರೋಟರಿ ಕ್ಲಬ್‌ ನಿಯೋಜಿತ ಅಧ್ಯಕ್ಷೆ ಸುನೀತಾ ಶ್ರೀಧರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಾರ್ಯದರ್ಶಿ ಡಾ.ಕಾಂಚನ್ ಕುಲಕರ್ಣಿ ಹಾಗೂ ತಾವು ಅಂದು ಅಧಿಕಾರ ಸ್ವೀಕರಿಸುವೆವು. ಅಂತರಾಷ್ಟ್ರೀಯ ರೋಟರಿ ಮಾಜಿ ಜಿಲ್ಲಾ ಗೌವರ್ನರ್ ಆಶಾ ಪ್ರಸನ್ನಕುಮಾರ್, ಇನ್ನರ್‌ವ್ಹೀಲ್‌ ಮಾಜಿ ಅಧ್ಯಕ್ಷೆ ಜಯಶ್ರೀ ಎಂ.ಅರಸ್, ಪ್ರಮುಖರಾದ ಎಂ.ಮುರಳಿ, ಆರ್.ರೇವಣ್ಣಸಿದ್ದಪ್ಪ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಮಹಿಳೆಯರ ಸ್ತನ ಕ್ಯಾನ್ಸರ್‌ ನಿವಾರಣೆಗೆ ಶ್ರಮಿಸಲಾಗುತ್ತಿದೆ. ಆರಂಭಿಕ ಹಂತದಲ್ಲೇ ಕ್ಯಾನ್ಸರ್‌ ಪತ್ತೆ ಹಚ್ಚಲು ಉಷಾ ನರ್ಸಿಂಗ್‌ ಹೋಂಗೆ ₹40 ಲಕ್ಷ ವೆಚ್ಚದ ಮ್ಯಾಮೊಗ್ರಫಿ ಯಂತ್ರ ನೀಡಲಾಗುತ್ತಿದೆ. ಅಲ್ಲಿ ತಪಾಸಣೆ ನಡೆಯುತ್ತದೆ ಎಂದರು.

ಮಹಿಳಾ ಸಬಲೀಕರಣಕ್ಕಾಗಿ 100 ಬಡ ಕುಟುಂಬಗಳಿಗೆ ಗೋದಾನ, ಆರೋಗ್ಯವಂತ ಶಿಶುಗಳ ಸ್ಪರ್ಧೆ, ಮಹಿಳಾ ಉದ್ಯಮಶೀಲತೆ ಕಾರ್ಯಾಗಾರ, ಬ್ಯಾಂಕಿಂಗ್ ಸೌಲಭ್ಯಗಳ ಮಾಹಿತಿ ನೀಡಲಾಗುವುದು. ಯುವಕರಿಗೂ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಿಶೋರ್‌ ಶಿರನಾಳಿ, ಡಾ.ಪಿ.ನಾರಾಯಣ್, ಡಾ.ಆರ್.ಡಿ.ಪ್ರಭು, ಡಾ.ರಾಘವೇಂದ್ರ ಹೊಸೂಡಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !