ಕೋಮು ಸಾಮರಸ್ಯಕ್ಕಾಗಿ ಸದ್ಭಾವನಾ ಮಂಚ್‌

7

ಕೋಮು ಸಾಮರಸ್ಯಕ್ಕಾಗಿ ಸದ್ಭಾವನಾ ಮಂಚ್‌

Published:
Updated:

ವಿಜಯಪುರ: ಕೋಮು ಸಾಮರಸ್ಯ, ಸೌಹಾರ್ದಕ್ಕಾಗಿ ಜಿಲ್ಲಾ ಸದ್ಭಾವನಾ ಮಂಚ್‌ ಆರಂಭಗೊಂಡಿದೆ ಎಂದು ವೇದಿಕೆಯ ಸಂಚಾಲಕ, ನಿವೃತ್ತ ಡಿವೈಎಸ್‌ಪಿ ಶಂಕರ ಎಂ.ಜೀರಗಾಳ ಹೇಳಿದರು.

ಮಂಚ್‌ನ ತಾಲ್ಲೂಕು ಘಟಕಗಳ ರಚನೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈಗಾಗಲೇ 58 ಸದಸ್ಯರು ಜಿಲ್ಲಾ ಘಟಕದಲ್ಲಿದ್ದರೆ, ಬಸವನಬಾಗೇವಾಡಿ ತಾಲ್ಲೂಕು ಘಟಕದಲ್ಲಿ 17 ಸದಸ್ಯರಿದ್ದಾರೆ. ಉಳಿದೆಡೆ ಘಟಕಗಳ ರಚನೆ ಕಾರ್ಯ ನಡೆದಿದೆ ಎಂದು ಶನಿವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜಕೀಯ ಪಕ್ಷದ ಮುಖಂಡರೊಬ್ಬರು, ಧರ್ಮಗುರುವೊಬ್ಬರು ಪರಸ್ಪರ ಸಮಾಜದ ಶಾಂತಿ ಕದಡುವ ಹೇಳಿಕೆ ನೀಡಿದ್ದರು. ಈ ಸಂದರ್ಭ ಮಂಚ್‌ನ ನಿಯೋಗ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು. ಮುಂದಿನ ದಿನಗಳಲ್ಲಿ ಶಾಲಾ–ಕಾಲೇಜುಗಳಲ್ಲಿ ಜಾಗೃತಿ ಶಿಬಿರ ನಡೆಸಲಿದ್ದೇವೆ ಎಂದು ಇದೇ ಸಂದರ್ಭ ಜೀರಗಾಳ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೊಡಗು ನೆರೆ ಸಂತ್ರಸ್ತರಿಗಾಗಿ ಮಂಚ್‌ ₹ 60000 ದೇಣಿಗೆ ಸಂಗ್ರಹಿಸಿದೆ. ಮುಂಬರುವ ಮಂಗಳವಾರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಇದನ್ನು ಅರ್ಪಿಸಲಾಗುವುದು ಎಂದು ಇದೇ ಸಂದರ್ಭ ತಿಳಿಸಿದರು.

ವಕೀಲ ವಿ.ಎಸ್‌.ಖಾಡೆ, ಜಮಾತೆ ಇಸ್ಲಾಮಿಯ ಅಧ್ಯಕ್ಷ ಮಹಮ್ಮದ್‌ ಯೂಸೂಫ್‌ ಖಾಜಿ, ಜಿಲ್ಲಾ ವಿಕಾಸ ವೇದಿಕೆಯ ಅಧ್ಯಕ್ಷ ಪೀಟರ್‌ ಅಲೆಕ್ಸಾಂಡರ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !