ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹ್ಯಾದ್ರಿ ಉತ್ಸವ: 10 ಕವಿಗಳ ಕವನಗಳಿಗೆ ನೃತ್ಯ ರೂಪಕ

Last Updated 10 ಜನವರಿ 2019, 15:25 IST
ಅಕ್ಷರ ಗಾತ್ರ

ಶಿವಮೊಗ್ಗ:ಹತ್ತು ವರ್ಷಗಳ ಬಳಿಕ ಜಿಲ್ಲೆಯಲ್ಲಿ ಮತ್ತೆ ಸಹ್ಯಾದ್ರಿ ಉತ್ಸವ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ನಡೆದಿದೆ.ಜನವರಿ 23ರಿಂದ 27ರವರೆಗೆಉತ್ಸವ ಜರುಗಲಿದೆಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸಹ್ಯಾದ್ರಿ ಉತ್ಸವ ಆಚರಣೆ ಕುರಿತುನಡೆದ ಜಿಲ್ಲೆಯ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಲಭ್ಯವಿರುವ ಅನುದಾನ ಬಳಸಿಕೊಂಡು ಅರ್ಥಪೂರ್ಣ ಉತ್ಸವ ಆಚರಿಸಲು ಸಿದ್ಧತೆ ನಡೆದಿದೆ.ಉತ್ಸವದ ಮೂಲಕ ಜಿಲ್ಲೆಯ ಸಾಂಸ್ಕತಿಕ ವೈಭವದ ಅನಾವರಣ, ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ.ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶನೀಡಲಾಗುವುದುಎಂದರು.

ಹಳೇ ಕಾರಾಗೃಹದಆವರಣದಲ್ಲಿ ಸಂಜೆ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಲಿವೆ. ಜಿಲ್ಲೆಯ, ರಾಜ್ಯದ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ. ಕಲಾವಿದರ ಪಟ್ಟಿ ಅಂತಿಮಗೊಳಿಸಲಾಗುತ್ತಿದೆ. ಬೆಳಗಿನಅವಧಿಯಲ್ಲಿ ಹಲವಾರು ವೈವಿಧ್ಯಮಯ ಚಟುವಟಿಕೆ ಆಯೋಜಿಸಲಾಗುತ್ತಿದೆ.ಎರಡು ದಿನ ದೇಶದ ವಿವಿಧ ಭಾಗಗಳ ಜಾನಪದ ಸಾಂಸ್ಕತಿಕ ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು, ಯುವಜನರಿಗೆ ಸೂಕ್ತ ವೇದಿಕೆ ಕಲ್ಪಿಸಲಾಗುತ್ತಿದೆ. ಕುವೆಂಪು, ಅಕ್ಕಮಹಾದೇವಿ, ಅಲ್ಲಮಪ್ರಭು, ಜಿ.ಎಸ್. ಶಿವರುದ್ರಪ್ಪ, ಲಕ್ಷ್ಮೀನಾರಾಯಣ ಭಟ್ ಸೇರಿದಂತೆ ಜಿಲ್ಲೆಯ ಖ್ಯಾತ 10 ಕವಿಗಳ ಆಯ್ದ ಕವನಗಳಿಗೆ ಕೊರಿಯಾಗ್ರಫಿ ಮಾಡಿ ನೃತ್ಯ ವೈಭವ ಪ್ರದರ್ಶಿಸಲಾಗುವುದು. ಜಿಲ್ಲೆಯ ಎಲ್ಲಾ ಪ್ರಮುಖ ನೃತ್ಯ ತಂಡಗಳು ಭಾಗವಹಿಸಲಿವೆ ಎಂದು ಮಾಹಿತಿ ನೀಡಿದರು.

ಉತ್ಸವದ ಅಂಗವಾಗಿ ವೈವಿಧ್ಯಮಯ ಕ್ರೀಡಾ ಚಟುವಟಿಕೆ ಆಯೋಜಿಸಲಾಗುತ್ತಿದೆ. ಈಜುಸ್ಪರ್ಧೆ, ದೇಹಧಾಡ್ಯ ಸ್ಪರ್ಧೆ, ಸ್ಕೇಟಿಂಗ್, ಲಾನ್ ಟೆನ್ನಿಸ್ ಗ್ರಾಮೀಣ ಕ್ರೀಡೆಗಳಾದ ಎತ್ತಿನ ಗಾಡಿ ಓಟ, ಕೆಸರುಗದ್ದೆ ಓಟದಂತಹ ಪಾರಂಪರಿಕ ಕ್ರೀಡೆಗಳನ್ನು ನಡೆಸಲಾಗುವುದು. ಐದು ದಿನ ಚಲನಚಿತ್ರೋತ್ಸವ, ಶಿವಮೊಗ್ಗ ನಗರದ ಪ್ರಮುಖ ಪಾರಂಪರಿಕ ತಾಣಗಳನ್ನು ಯುವಜನತೆಗೆ ಪರಿಚಯಿಸಲು ಪಾರಂಪರಿಕ ನಡಿಗೆ ಆಯೋಜಿಸಲಾಗುತ್ತಿದೆ. ಶಿವಪ್ಪ ನಾಯಕ ಅರಮನೆಯಿಂದ ಪಾರಂಪರಿಕ ನಡಿಗೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ವಿವರ ನೀಡಿದರು.

ಆನೆಗಳ ಉತ್ಸವ, ವಸ್ತು ಪ್ರದರ್ಶನ ಮಳಿಗೆಗಳು, ವಿಜ್ಞಾನ ವಸ್ತು ಪ್ರದರ್ಶನ, ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರತಿ ದಿನ ರಿಯಾಯಿತಿ ದರದಲ್ಲಿ ಕೆಎಸ್‍ಆರ್ಟಿಸಿಬಸ್ ಮೂಲಕ ಪ್ಯಾಕೇಜ್ ಪ್ರವಾಸ ಸೇರಿದಂತೆ ಹತ್ತಾರು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಆರ್.ಪ್ರಸನ್ನ ಕುಮಾರ್,ಹೆಚ್ಚುವರಿಜಿಲ್ಲಾಧಿಕಾರಿ ಜೆ. ಅನುರಾಧಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT