ಶನಿವಾರ, ಡಿಸೆಂಬರ್ 14, 2019
24 °C

ಜಾಗ ಕಬಳಿಕೆ ವಿರೋಧಿಸಿ ಉಪವಾಸ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಭದ್ರಾವತಿ ತಾಲ್ಲೂಕು ಬಿಳಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವಲೆ ಬಸಾಪುರ ಬಳಿ 5.18 ಎಕರೆ ಗ್ರಾಮಠಾಣ ಜಾಗ ಕಬಳಿಸಲಾಗಿದೆ. ಪಟ್ಟಭದ್ರರಿಗೆ ಪಂಚಾಯಿತಿ ಅಧಿಕಾರಿಗಳು ಸಹಕರಿಸಿದ್ದಾರೆ ಎಂದು ಆರೋಪಿಸಿ ಭದ್ರಾವತಿ ಮಾನವ ಹಕ್ಕುಗಳು ಹೋರಾಟ ಸಮಿತಿ ಕಾರ್ಯಕರ್ತರು ಮಂಗಳವಾರ ಜಿಲ್ಲಾ ಪಂಚಾಯಿತಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿದರು.

ಗ್ರಾಮ ಠಾಣ ಜಾಗದಲ್ಲಿ ಬಡವರಿಗೆ ನಿವೇಶನ ಹಂಚಲು ಒತ್ತಾಯಿಸಿ ಬಸಾಪುರದಲ್ಲಿ ನಡೆಸುತ್ತಿರುವ ಹೋರಾಟ 150 ದಿನಗಳನ್ನು ಪೂರೈಸಿದೆ. ಇದುವರೆಗೂ ಸಮಸ್ಯೆ ಬಗೆಹರಿದಿಲ್ಲ. ಭದ್ರಾವತಿ ತಾಲ್ಲೂಕು ಆಡಳಿತ, ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿವೆ ಎಂದು ಆರೋಪಿಸಿದರು.

ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಮುಖಂಡರಾದ ಐ.ಎಲ್‌.ಅರುಣ್‌ಕುಮಾರ್, ಎಂ.ವಿ ಚಂದ್ರಶೇಖರ್, ಅಕ್ರಂಖಾನ್, ಸೋಮಣ್ಣ, ಗವಿಸಿದ್ದಯ್ಯ, ಬ್ರಹ್ಮಲಿಂಗಯ್ಯ, ಆರ್.ಬಸವರಾಜ್, ಸುಬ್ಬೇಗೌಡರು, ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ವಿ ಗಿರೀಶ್, ಜೆಡಿಯು ಯುವ ಘಟಕದ ಉಪಾಧ್ಯಕ್ಷ ಶಶಿಕುಮಾರ್ ಎಸ್.ಗೌಡ, ನವಲೆ ಬಸಾಪುರ ಗ್ರಾಮಸ್ಥರಾದ ವರಲಕ್ಷ್ಮಿ, ಎನ್. ಲತಾ, ಅನ್ನಪೂರ್ಣ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)