ಅಧಿಕಾರ ವಂಚಿತ ಪರಿಶಿಷ್ಟ ಮಹಿಳೆ–ಆರೋಪ

7

ಅಧಿಕಾರ ವಂಚಿತ ಪರಿಶಿಷ್ಟ ಮಹಿಳೆ–ಆರೋಪ

Published:
Updated:
Deccan Herald

ಮಾಡಬಾಳ್‌(ಮಾಗಡಿ): ‘ಸಂವಿಧಾನದತ್ತ ಸವಲತ್ತುಗಳನ್ನು ಶೋಷಿತ ಸಮುದಾಯಗಳಿಗೆ ದೊರಕಿಸಿಕೊಡುವಲ್ಲಿ ಸ್ಥಳೀಯ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಶಿಳ್ಳೆಕ್ಯಾತ ಸಮುದಾಯದ ಗ್ರಾಮ ಪಂಚಾಯಿತಿ ಸದಸ್ಯೆ ಲಕ್ಷ್ಮಮ್ಮ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೇತೇನಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸದಸ್ಯೆಯಾಗಿ ಆಯ್ಕೆಯಾಗಿದ್ದೇನೆ. ಪರಿಶಿಷ್ಟ ಪಂಗಡಕ್ಕೆ ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಇದೆ. ಚುನಾವಣೆಗೆ ಮುನ್ನ ಅನಕ್ಷರಸ್ಥರಾದ ನಮಗೆ ಜಾತಿ ಪ್ರಮಾಣ ಪತ್ರ ಮಾಡಿಸುವುದು ತಿಳಿದಿರಲಿಲ್ಲ’ ಎಂದಿ‌ದ್ದಾರೆ.

‘ಚುನಾವಣೆ ಮುಗಿದ ಮೇಲೆ ಉಪಾಧ್ಯಕ್ಷರ ಆಯ್ಕೆ ವಿಷಯ ಬಂದಾಗ ಅಧಿಕಾರಿಗಳಲ್ಲಿ ನಮಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಮಾಡಿಸಿಕೊಡುವಂತೆ ಬೇಡಿಕೊಂಡೆ. ಇನ್ನಿಲ್ಲದ ಸಬೂಬು ಹೇಳಿದರು. ಕಡುಬಡವರಾದ ನಮ್ಮ ಬೆಂಬಲಕ್ಕೆ ಯಾರೂ ಬರಲಿಲ್ಲ’ ಅಳಲು ವ್ಯಕ್ತಪಡಿಸಿದ್ದಾರೆ.

‘ಅಲೆಮಾರಿಗಳಾಗಿದ್ದ ನಾವು ಉಡುವೆಗೆರೆ ಗ್ರಾಮದಲ್ಲಿ ಗುಡಿಸಲು ಹಾಕಿಕೊಂಡು ನೆಲೆನಿಂತೆವು. ಚುನಾಯಿತ ಪ್ರತಿನಿಧಿಗಳಾದ ಮೇಲೆ ಪುಟ್ಟ ಮನೆಯನ್ನು ಕಟ್ಟಿಕೊಂಡಿದ್ದೇವೆ. ಸಂವಿಧಾನದ ಅವಕಾಶವಿದ್ದರೂ ತಿಳಿವಳಿಕೆ ಇಲ್ಲದ ಕಾರಣ ನನಗೆ ಉಪಾಧ್ಯಕ್ಷರ ಹುದ್ದೆ ಸಿಕ್ಕಲಿಲ್ಲ’ ಎಂದು ದೂರಿದ್ದಾರೆ.

‘ಈಗಲೂ ಉಪಾಧ್ಯಕ್ಷರ ಹುದ್ದೆ ಖಾಲಿ ಇದೆ. ಸಂಬಂಧ ಪಟ್ಟ ಅಧಿಕಾರಿಗಳು ನಮಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಮಾಡಿಸಿಕೊಡಲು ಮನವಿ ಮಾಡಿದ್ದೇವೆ’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !