ಬುಧವಾರ, ಡಿಸೆಂಬರ್ 11, 2019
24 °C

ಕಾಡಳ್ಳಿ ಸಿದ್ದೇಗೌಡಗೆ ಸೇವಾ ಪುರಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕನಕಪುರ: ಶ್ರೀರಮಣ ಮಹರ್ಷಿ ಅಂಧರ ಸಂಸ್ಥೆಯಲ್ಲಿ 25ವರ್ಷಗಳಿಂದ ಸುದೀರ್ಘ ಸೇವೆ ಸಲ್ಲಿಸುತ್ತಿರುವ ತಾಲ್ಲೂಕಿನ ಸಾತನೂರು ಹೋಬಳಿ ಕಾಡಳ್ಳಿ ಗ್ರಾಮದ ಸಿದ್ದೇಗೌಡ ಅವರಿಗೆ ಈಚೆಗೆ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಹಾರೋಹಳ್ಳಿ ಮಂಜುನಾಥ ಕಲ್ಯಾಣ ಮಂಟಪದಲ್ಲಿ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಮತ್ತು ಸೇವಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ಪ್ರಶಸ್ತಿ ಪ್ರದಾನ ಮಾಡಿದರು.

ಸಿದ್ದೇಗೌಡ ಅವರು ಶ್ರೀರಮಣ ಮಹರ್ಷಿ ಅಂಧರ ಸಂಸ್ಥೆಯಲ್ಲಿ ಯೋಜನಾ ಸಂಯೋಜಕರಾಗಿ 1992ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಜಿಲ್ಲಾ ಮಟ್ಟದಲ್ಲಿ ನೀಡಲಾಗುವ ಹಲವು ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದಾರೆ.

ಪ್ರತಿಕ್ರಿಯಿಸಿ (+)