ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಪದ್ಧತಿ ವಿರುದ್ಧ ಶರಣರ ಸಮರ

ಹೆಚ್ಚುವರಿ ಜಿಲ್ಲಾಧಿಕಾರಿ ಜೆ.ಅನುರಾಧ ಶ್ಲಾಘನೆ
Last Updated 21 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಶಿವಮೊಗ್ಗ:ಮೂಢನಂಬಿಕೆಗಳು, ಜಾತಿ ಪದ್ಧತಿ ವಿರುದ್ಧ ಶರಣರು 12ನೇ ಶತಮಾನದಲ್ಲೇ ಸಮರ ಸಾರಿದ್ದರು. ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು ಎಂದು ಹೆಚ್ಚುವರಿ ಜಿಲ್ಲಾಧಿಕಾರಿಜೆ.ಅನುರಾಧಸ್ಮರಿಸಿದರು.

ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರ ಪಾಲಿಕೆಸಹಯೋಗದಲ್ಲಿಕಾಯಕ ಶರಣರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾಯಕ ಶರಣರು, ಬಸವಣ್ಣ, ಅಕ್ಕಮಹಾದೇವಿಸೇರಿದಂತೆ ನೂರಾರುಶರಣರು12ನೇ ಶತಮಾನದಲ್ಲಿ ಬಂದು ಹೋಗಿದ್ದಾರೆ. ಹಾಗಾಗಿ, 12ನೇ ಶತಮಾನ ಬಹಳ ಮಹತ್ವದಕಾಲಘಟ್ಟ.ಸಮಾಜದ ಕೆಲವು ಜಯಂತಿಗಳನ್ನು ಆಚರಿಸಿದರೆ ಸಾಲದು. ಸಮಾಜದಅಂಕುಡೊಂಕು ತಿದ್ದುವ ಕೆಲಸ ಮಾಡಬೇಕಿದೆ.ಪಠ್ಯಪುಸ್ತಕಗಳಲ್ಲಿ ಶರಣರ ತತ್ವಗಳನ್ನು ಅಳವಡಿಸಬೇಕು. ಸಮಾಜದಲ್ಲಿ ಸಮಾನತೆ ಸಾರಬೇಕಿದೆ ಎಂದು ಪ್ರತಿಪಾದಿಸಿದರು.

ಪ್ರಾಧ್ಯಾಪಕ ಡಾ.ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಸತ್ಯ, ಶುದ್ಧ ಕಾಯಕದ ಮೂಲಕ ಜೀವನ ನಡೆಸಲು ಹಲವುವಚನಕಾರರು ಪರಿಣಾಮಕಾರಿ ವಚನಗಳನ್ನು ರೂಪಿಸಿದರು. ಸಮಾಜ ತಿದ್ದುವ ಕಾರ್ಯ ಮಾಡಿದರು.ಅವರ ವಚನಗಳು ಇಂದಿನ ಸಮಾಜಕ್ಕೂ ಪ್ರಸ್ತುತ. ಅವರು ನೀಡಿರುವ ಸಂದೇಶ ಪಾಲಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಬಸವಣ್ಣ, ಅಕ್ಕಮಹಾದೇವಿ ಕಾಲಘಟ್ಟದಲ್ಲಿ ದಲಿತ ವಚನಕಾರರು ಸಾಹಿತ್ಯಲೋಕಕ್ಕೆ ಹಲವು ವಚನಗಳನ್ನು ನೀಡಿದ್ದಾರೆ.ಅಂಥ ಮಹನೀಯರನ್ನು ಸ್ಮರಿಸಬೇಕಿದೆ ಎಂದರು.

ದಾಕ್ಷಾಯಿಣಿ ರಾಜಕುಮಾರ್ ಮತ್ತು ತಂಡ ವಚನ ಗಾಯನ ನಡೆಯಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಎಚ್‌.ಉಮೇಶ್,ಸಮಾಜದ ಮುಖಂಡ ಹಾಲೇಶಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT