ಬೆಂಗಳೂರಿಗೆ ಶರಾವತಿ ನೀರು: ಬಂದ್‌ ಸಂಪೂರ್ಣ ಯಶಸ್ವಿ

ಗುರುವಾರ , ಜೂಲೈ 18, 2019
28 °C

ಬೆಂಗಳೂರಿಗೆ ಶರಾವತಿ ನೀರು: ಬಂದ್‌ ಸಂಪೂರ್ಣ ಯಶಸ್ವಿ

Published:
Updated:

ಶಿವಮೊಗ್ಗ: ಶರಾವತಿ ನದಿ ನೀರು ಬೆಂಗಳೂರಿಗೆ ಹರಿಸಲು ಯೋಜನೆ ರೂಪಿಸುತ್ತಿರುವ ಸರ್ಕಾರದ ನಿರ್ಧಾರ ಖಂಡಿಸಿ ಶರಾವತಿ ಉಳಿಸಿ ಹೋರಾಟ ಒಕ್ಕೂಟ ಕರೆ ನೀಡಿದ್ದ ಬಂದ್‌ ಜಿಲ್ಲೆಯ ಎಲ್ಲೆಡೆ ಯಶಸ್ವಿಯಾಗಿದೆ.

ಸುರಿವ ಮಳೆ ಲೆಕ್ಕಿಸದೇ ಜನ ಸಾಮಾನ್ಯರು, ವಿದ್ಯಾರ್ಥಿಗಳು, ರೈತರು, ಮಹಿಳೆಯರು, ಮಠಾಧೀಶರು, ಬುದ್ಧಿಜೀವಿಗಳು, ವಿವಿಧ ಸಂಘಟನೆ, ರಾಜಕೀಯ ಪಕ್ಷಗಳ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ವರ್ತಕರು ಸ್ವಯಂ ಇಚ್ಚೆಯಿಂದ ಅಂಗಡಿ ಬಾಗಿಲು ಮುಚ್ಚಿ ಬಂದ್‌ಗೆ ಬೆಂಬಲ ನೀಡಿದರು. ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಲಾಗಿತ್ತು. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ತೆರೆದಿದ್ದರೂ ಜನ ಸಂದಣಿ ಇರಲಿಲ್ಲ.

ಶಿವಮೊಗ್ಗದ ಸೈನ್ಸ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ಜನಸಾಗರವೇ ನೆರೆದಿತ್ತು. ಬಹಿರಂಗ ಸಭೆ ನಡೆಯುವಾಗ ಮಳೆ ಸುರಿದರೂ ಜನರು ಅತ್ತಿತ್ತ ಕದಲಲಿಲ್ಲ. ಶರಾವತಿ ನದಿ ಹುಟ್ಟುವ ತೀರ್ಥಹಳ್ಳಿ, ಅದು ಸಾಗುವ ಹೊಸನಗರ, ಸಾಗರ ತಾಲ್ಲೂಕುಗಳಲ್ಲಿ ಅತಿ ಹೆಚ್ಚಿನ ಜನರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಬಸ್‌, ಆಟೊರಿಕ್ಷಾ ಸಂಚಾರ ವಿರಳವಾಗಿತ್ತು. ವಿಸ್ತೃತ ಯೋಜನಾ ವರದಿ ತಯಾರಿಕೆಯ ಆದೇಶವನ್ನು ಸರ್ಕಾರ ಹಿಂಪಡೆಯುವವರೆಗೂ ಹೋರಾಟ ಮುಂದುವರಿಸುವುದಾಗಿ ಸಂಘಟನೆಯ ಮುಖಂಡರು ಘೋಷಿಸಿದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !