ಗುರುವಾರ , ಡಿಸೆಂಬರ್ 5, 2019
26 °C

ತಾಳಿಕೋಟೆ | ಕಾಲುಗಳಿಂದಲೇ ಪದವಿ ಪರೀಕ್ಷೆ ಬರೆದ ಬಾಗಮ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಾಳಿಕೋಟೆ: ಪಟ್ಟಣದ ಖಾಸ್ಗತೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಪದವಿ ಪ್ರಥಮ ಸೆಮಿಸ್ಟರ್ ಪರೀಕ್ಷೆಯಲ್ಲಿ ತಾಲ್ಲೂಕಿನ ಮೈಲೇಶ್ವರ ಗ್ರಾಮದ ಬಾಗಮ್ಮ ಹೆಬ್ಬಾಳ ಕಾಲುಗಳಿಂದಲೇ ಪರೀಕ್ಷೆ ಬರೆದಳು.

ಬಾಲ್ಯದಿಂದಲೆ ತನ್ನೆರಡು ಕೈಗಳು ಮೋಟಾಗಿದ್ದರೂ, ಹೆತ್ತವರ ಹಾಗೂ ಶಿಕ್ಷಕರ ಪ್ರೋತ್ಸಾಹದಿಂದ ಕಾಲುಗಳಿಂದಲೇ ಬರೆಯುವ ರೂಢಿ ಮಾಡಿಕೊಂಡ ಬಾಗಮ್ಮ ಎಸ್.ಎಸ್.ಎಲ್ಸಿ ಹಾಗೂ ಪಿಯು ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರಿದ್ದರು.

‘ದೇವರು ನನಗೆ ಕೈ ಕೊಡದಿದ್ದರೇನು ಓದುವ ಹಂಬಲದಿಂದ ಕಾಲುಗಳಿಂದಲೇ ಬರೆಯುವ ರೂಢಿ ಮಾಡಿಕೊಂಡೆ. ವೇಗ ಕಡಿಮೆಯಾದರೂ ಸ್ಪಷ್ಟವಾಗಿ, ಸುಂದರವಾಗಿ ಬರೆಯುವುದನ್ನು ರೂಡಿಸಿಕೊಂಡಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು. ಪದವಿ ಪರೀಕ್ಷೆಯಲ್ಲಿ ಪ್ರಥಮ ವರ್ಗದಲ್ಲಿ ಉತ್ತೀರ್ಣಳಾಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು

‘ಅವಳ ಉತ್ಸಾಹ, ಆತ್ಮವಿಶ್ವಾಸ, ಪರಿಶ್ರಮ ಇತರರಿಗೆ ಮಾದರಿಯಾಗಿದೆ’ ಎಂದು ಪ್ರಾಚಾರ್ಯ ಡಾ.ಎಂ.ಎಸ್.ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)