ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸದಸ್ಯೆ ಲತಾ ಗಣೇಶ್ ಮೇಯರ್; ಚನ್ನಬಸಪ್ಪ ಉಪ ಮೇಯರ್

Last Updated 28 ನವೆಂಬರ್ 2018, 9:18 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಸದಸ್ಯರಾದ ಲತಾ ಗಣೇಶ್ ಮೇಯರ್ ಹಾಗೂ ಎಸ್‌.ಎನ್‌. ಚನ್ನಬಸಪ್ಪ ಉಪ ಮೇಯರ್ ಆಗಿ ಆಯ್ಕೆಯಾದವರು.

ಲತಾ ಹಾಗೂ ಚನ್ನಬಸಪ್ಪ ತಲಾ 26 ಮತಗಳನ್ನು ಪಡೆದರು. ಅವರ ವಿರುದ್ಧ ಮೇಯರ್‌ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಮಂಜುಳಾ ಶಿವಣ್ಣ ಹಾಗೂ ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಚ್‌.ಸಿ. ಯೋಗೀಶ್ ಅವರಿಗೆ ತಲಾ 12 ಮತಗಳು ದೊರೆತವು.

ಬಿಜೆಪಿ ಅಭ್ಯರ್ಥಿಗಳು 14 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಶಿವಯೋಗಿ ಸಿ. ಕಳಸದ್ ಘೋಷಿಸಿದರು.

35 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿಯ 23(ಮೂವರು ಪಕ್ಷೇತರರು ಸೇರಿ) ಕಾಂಗ್ರೆಸ್‌ನ 8 (ಒಬ್ಬರು ಪಕ್ಷೇತರರು ಸೇರಿ), ಜೆಡಿಎಸ್ 2 ಎಸ್‌ಟಿಪಿಐ 1 ಹಾಗೂ ಒಬ್ಬರು ಪಕ್ಷೇತರರು ಇದ್ದಾರೆ.

ಒಬ್ಬರು ಸಂಸದರು (ಬಿಜೆಪಿ), ಇಬ್ಬರು ಶಾಸಕರು (ಬಿಜೆಪಿ), ನಾಲ್ವರು ವಿಧಾನ ಪರಿಷತ್ ಸದಸ್ಯರು (ಇಬ್ಬರು ಬಿಜೆಪಿ, ಒಬ್ಬರು ಕಾಂಗ್ರೆಸ್‌ ಹಾಗೂ ಜೆಡಿಎಸ್) ಸೇರಿ ಒಟ್ಟು 42 ಸದಸ್ಯರು ಮತದಾನದ ಹಕ್ಕು ಹೊಂದಿದ್ದರು. ಸಂಸದ ಹಾಗೂ ಇಬ್ಬರು ವಿಧಾನ ಪರಿಷತ್‌ ಸದಸ್ಯರು ಗೈರುಹಾಜರಾದ ಕಾರಣ 39 ಸದಸ್ಯರು ಮತದಾನದ ವೇಳೆ ಹಾಜರಿದ್ದರು. ಪಾಲಿಕೆಯ ಒಬ್ಬ ಪಕ್ಷೇತರ ಸದಸ್ಯ ಸ್ಥಳದಲ್ಲಿ ಹಾಜರಿದ್ದರೂ ಯಾರಿಗೂ ಮತ ಚಲಾಯಿಸದೆ ತಟಸ್ಥವಾಗಿ ಉಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT