ಗ್ರಾಪಂಗೆ ಜೆಡಿಎಸ್‌.ಬೆಂಬಲಿತ ಅಭ್ಯರ್ಥಿ ಶಿವಕುಮಾರ್‌ ಆಯ್ಕೆ

7

ಗ್ರಾಪಂಗೆ ಜೆಡಿಎಸ್‌.ಬೆಂಬಲಿತ ಅಭ್ಯರ್ಥಿ ಶಿವಕುಮಾರ್‌ ಆಯ್ಕೆ

Published:
Updated:
Prajavani

ಹಾರೋಹಳ್ಳಿ (ಕನಕಪುರ): ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ಕಗ್ಗಲಹಳ್ಳಿ ಗ್ರಾಮ ಪಂಚಾಯಿತಿ ಗುಳ್ಳಟ್ಟಿ ಕಾವಲ್‌ನ ಸದಸ್ಯ ಸ್ಥಾನಕ್ಕೆ ನಡೆದಿದ್ದ ಉಪ ಚುನಾವಣೆಯಲ್ಲಿ ಜೆ.ಡಿ.ಎಸ್‌. ಬೆಂಬಲಿತ ಶಿವಕುಮಾರ್‌ ಗೆಲುವು ಸಾಧಿಸಿದ್ದಾರೆ.

ಚುನಾವಣೆಯಲ್ಲಿ ಶಿವಕುಮಾರ್‌ ಜೆ.ಡಿ.ಎಸ್‌. ಬೆಂಬಲಿತರಾಗಿ, ಶಿವರಾಜು ಕಾಂಗ್ರೆಸ್‌ ಬೆಂಬಲಿತರಾಗಿ, ರಾಮಚಂದ್ರ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಶಿವಕುಮಾರ್‌ ಗೆ 149 ಮತ, ರಾಮಚಂದ್ರಗೆ 80 ಮತ, ಶಿವರಾಜುಗೆ 67 ಮತ ಲಭಿಸಿದ್ದವು. ಶಿವಕುಮಾರ್‌ ಪ್ರತಿಸ್ಪರ್ಧಿ ರಾಮಚಂದ್ರರಿಗಿಂತ 69 ಹೆಚ್ಚಿನ ಮತ ಗಳಿಸಿ ಜಯಶೀಲರಾದರು.

ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಕ್ಕೆ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಶಕುಂತಲ ಸೋಮಸುಂದರ್‌ ಗ್ರಾಮದಲ್ಲಿ ಜನತೆಗೆ ಸಿಹಿ ಹಂಚಿ ಮತದಾರರಿಗೆ ಅಭಿನಂದನೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !