ಭಾನುವಾರ, ಜನವರಿ 19, 2020
21 °C

ನಾಳೆ ಕನಕದಾಸರ ಕೃತಿಗಳ ಬಿಡುಗಡೆ, ಗಾಯನ ವ್ಯಾಖ್ಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಶ್ರೀಗಂಧ ಸಂಸ್ಥೆ ಕುವೆಂಪು ರಂಗಮಂದಿರದಲ್ಲಿ ಜ.10ರಂದು ಸಂಜೆ 6ಕ್ಕೆ ಕೇಶವ ಸಂಪದ ಕನಕದಾಸರ ಕೃತಿಗಳ ಬಿಡುಗಡೆ ಹಾಗೂ ಗಾಯನ ವ್ಯಾಖ್ಯಾನ ಕಾರ್ಯಕ್ರಮ ಆಯೋಜಿಸಿದೆ.

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಕನಕದಾಸರ ಆಧ್ಯಾತ್ಮ ಗಂಗೆಯಾದ ಶ್ರೀಹರಿ ಭಕ್ತೆ ಶಾರದಾ ವ್ಯಾಖ್ಯಾನವನ್ನು ಒಂದೇ ಸಂಪುಟದಲ್ಲಿ ಮತ್ತೆ ಪ್ರಕಟಿಸಿದೆ. ಅದು ಸಾವಿರ ಪುಟಗಳ ಮುದ್ರಿತ ಗ್ರಂಥ. ಈ ಗ್ರಂಥ ಮತ್ತು ಕನಕದಾಸರ ಚಿಂತನೆಯ ಹೊನಲು ಎಂಬ ಕೃತಿ ಹಾಗೂ ಕನಕದಾಸರ ಶೃಂಗಾರ ಕಾವ್ಯ ಮೋಹನ ತರಂಗಿಣಿ (ವ್ಯಾಖ್ಯಾನ-ವಿಶ್ಲೇಷಣೆ) ಮೂರನೇ ಸಂಪುಟ ಪುಸ್ತಕಗಳು ಅಂದು ಬಿಡುಗಡೆಯಾಗಲಿವೆ ಎಂದು  ಸಂಸ್ಥೆಯ ಸಂಚಾಲಕ ಬಿ.ಆರ್.ಮಧುಸೂದನ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ  ಪುಸ್ತಕ ಬಿಡುಗಡೆ ಮಾಡುವರು. ಕೃತಿರಚನೆಕಾರ ಎಂ.ಆರ್.ಸತ್ಯನಾರಾಯಣ್ ಉಪಸ್ಥಿತರಿರುವರು. ಶ್ರೀಗಂಧ ಸಂಸ್ಥೆ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸುವರು.  ಹುಬ್ಬಳ್ಳಿಯ ಕಿರಣ್ ರಾಮ್‌ ಕನಕದಾಸರ ಗೀತೆಗಳ ವಿಶೇಷ ಗಾಯನ ವ್ಯಾಖ್ಯಾನಿಸುವರು. ಗಾಯಕರಾದ ಜಿ.ಪಾರ್ಥ ಚಿರಂತನ, ಜಿ.ಪೃಥ್ವಿಗೌಡ, ಧನ್ಯಶ್ರೀ ಅಡಿಗ, ಸಂಜನಾ ಗಾಯನ ನೀಡುವರು. ಚಿಂತಕ ವಿನಯ್ ಅವರ ಪರಿಕಲ್ಪನೆಯೊಂದಿಗೆ ಈ ಕಾರ್ಯಕ್ರಮ ಮೂಡಿಬರಲಿದೆ ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಪ್ರಮುಖರಾದ ಚೇತನ್, ಸಹನಾ ಚೇತನ್, ಕೃಷ್ಣಾನಂದ, ಆ.ಚಿ.ಪ್ರಕಾಶ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು