ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ 74 ಜನರಿಗೆ ಸೋಂಕು, ಪ್ರತಿ ದಿನ ಮಧ್ಯಾಹ್ನ 3ರ ನಂತರ ಶಿವಮೊಗ್ಗ ಬಂದ್‌

29 ಜನರು ಗುಣಮುಖ
Last Updated 13 ಜುಲೈ 2020, 17:19 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರ ಪಾಲಿಕೆ ವ್ಯಾಪ್ತಿಯಲ್ಲಿ ಜುಲೈ 14ರಿಂದ ಪ್ರತಿ ದಿನ ಮಧ್ಯಾಹ್ನ ಲಾಕ್‌ಡೌನ್‌ ಮಾಡಲು ಜಿಲ್ಲಾಡಳಿತ, ನಗರ ಪಾಲಿಕೆ ನಿರ್ಧರಿಸಿವೆ.

ಶಿವಮೊಗ್ಗ ನಗರದಲ್ಲೇಕೊರೊನಾ ಸೋಂಕಿತರ ಸಂಖ್ಯೆ 200ರ ಗಡಿ ಸಮೀಪಿಸುತ್ತಿರುವ ಕಾರಣ ಗಾಂಧಿ ಬಜಾರ್‌ ಸೇರಿದಂತೆ ಹಲವು ವಾಣಿಜ್ಯಪ್ರದೇಶಗಳಲ್ಲಿ ವ್ಯಾಪಾರಿಗಳು ಸ್ವಯಂ ಪ್ರೇರಿತ ಲಾಕ್‌ಡೌನ್‌ ಘೋಷಿಸಿದ್ದರು. ಸೋಮವಾರ ಮುಖ್ಯಮಂತ್ರಿಗಳ ಜತೆಗಿನ ವೀಡಿಯೊ ಸಂವಾದದ ನಂತರ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಆಯುಕ್ತ ಚಿದಾನಂದ ವಟಾರೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಮಧ್ಯಾಹ್ನದ ನಂತರಇಡೀ ನಗರ ಬಂದ್‌ ಮಾಡಲು ನಿರ್ಧರಿಸಿದರು.

74ಜನರಿಗೆ ಸೋಂಕು, 29 ಜನರು ಗುಣಮುಖ

ಜಿಲ್ಲೆಯಲ್ಲಿ ಸೋಮವಾರ74 ಜನರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಒಂದೇ ದಿನ 29 ಜನರು ಗುಣಮುಖರಾಗಿದ್ದಾರೆ. ಶಿವಮೊಗ್ಗ ನಗರ 4, ತೀರ್ಥಹಳ್ಳಿ ಒಟ್ಟು ಸೋಂಕಿತರ ಸಂಖ್ಯೆ 568ಕ್ಕೇರಿದೆ. ಇದುವರೆಗೂ227 ಜನರು ಗುಣಮುಖರಾಗಿದ್ದಾರೆ. ಮೆಗ್ಗಾನ್‌ ಸೇರಿದಂತೆ ವಿವಿಧ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ331 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವಕೆ.ಎಸ್.ಈಶ್ವರಪ್ಪಅವರ ಮನೆಯ ಕೆಲಸದವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದೆ.

ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 68 ವರ್ಷದ ಪುರುಷ (ಪಿ–40069) ಮೃತಪಟ್ಟಿದ್ದಾರೆ.

ಸಹ್ಯಾದ್ರಿ ನಗರ, ಜೆ.ಎಚ್.ಪಟೇಲ್ ಬಡಾವಣೆ, ಚೌಡೇಶ್ವರಿ ದೇವಸ್ಥಾನದ ಎದುರು, ಸವಾರ್ ಲೈನ್ ರಸ್ತೆ, ಗುತ್ಯಪ್ಪ ಕಾಲೊನಿ, ತಾವರೆಚಟ್ನಳ್ಳಿ, ಗೋಪಾಳದ ಹಲವು ಭಾಗಗಳನ್ನುಸೀಲ್‌ಡೌನ್ ಮಾಡಲಾಗಿದೆ.

ಐವರಿಗೆಕೊರೊನಾಸೋಂಕು (ತೀರ್ಥಹಳ್ಳಿ ವರದಿ):ಬೆಂಗಳೂರಿನಿಂದ ಬಂದಿದ್ದತೀರ್ಥಹಳ್ಳಿ ಮಂಡಗದ್ದೆ ಮೂಲದ ಒಂದೇ ಕುಟುಂಬದಮೂವರಿಗೆಸೋಂಕು ತಗಲಿದೆ. 38 ವರ್ಷದ ತಂದೆ, 29 ವರ್ಷದ ತಾಯಿ ಹಾಗೂ 8 ವರ್ಷದ ಹೆಣ್ಣು ಮಗುವಿಗೆ ಸೋಂಕು ತಗಲಿದೆ.ತಾಲ್ಲೂಕಿನ ಕಳ್ಳಿಗದ್ದೆ ಗ್ರಾಮದ ಇಬ್ಬರು ಮಹಿಳೆಯರಿಗೆ ಸೋಂಕು ತಗಲಿದೆ. 35 ವರ್ಷದ ಮಹಿಳೆ ಹಾಗೂ 18 ವರ್ಷದ ಯುವತಿಗೆ ಸೋಂಕುಇರುವುದು ಪತ್ತೆಯಾಗಿದೆ.

ಲಾಕ್‌ಡೌನ್ಪರಿಣಾಮಬೆಂಗಳೂರಿನಿಂದ ಹೆಚ್ಚು ಜನರುಗ್ರಾಮಗಳಿಗೆ ಮರಳುತ್ತಿದ್ದಾರೆ. ಹಾಗಾಗಿ, ಸೋಂಕು ಹೆಚ್ಚು ವ್ಯಾಪಿಸುವ ಸಾಧ್ಯತೆಇದೆ. ಬೆಂಗಳೂರಿನಿಂದ ಬಂದವರು 14 ದಿನ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಶಾಸಕ ಆರಗ ಜ್ನಾನೇಂದ್ರ , ತಹಶೀಲ್ದಾರ್ ಡಾ.ಎಸ್.ಬಿ.ಶ್ರೀಪಾದ್ ಅವರು ಸಾರ್ವಜನಿಕರ ಮನವಿ ಮಾಡಿದ್ದಾರೆ.

ಎರಡು ಪ್ರಕರಣ ಪಾಸಿಟಿವ್ (ಸಾಗರ ವರದಿ)

ತಾಲ್ಲೂಕಿನಲ್ಲಿ ಸೋಮವಾರ ಎರಡು ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ.ನಗರದ ಜಿ.ಪಿ.ರಸ್ತೆಯ 40 ವರ್ಷದ ಮಹಿಳೆಗೆ ಸೋಂಕು ಇರುವುದು ಧೃಡಪಟ್ಟಿದೆ. ಅವರ ಪತಿಗೆ ಎರಡು ದಿನಗಳ ಹಿಂದೆ ಪಾಸಿಟಿವ್ ಬಂದಿತ್ತು.ತಾಲ್ಲೂಕಿನ ಆನಂದಪುರಂನ 62 ವರ್ಷದ ವೃದ್ಧರೊಬ್ಬರಿಗೆ ಸೋಂಕು ತಗುಲಿದೆ.ಇದರೊಂದಿಗೆ ತಾಲ್ಲೂಕಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ26ಕ್ಕೆ ಏರಿದೆ.

ಕೊಳಗಿ ಗ್ರಾಮಸ್ಥರಿಗೆ ಸಂಕಷ್ಟ ತಂದ ಯುವಕ (ಶಿರಾಳಕೊಪ್ಪ ವರದಿ)

ಕೊಳಗಿ ಗ್ರಾಮಕ್ಕೆ ಬಂದಿದ್ದಯುವಕನೊಬ್ಬನಿಗೆ ಸೋಂಕು ದೃಢಪಟ್ಟಿದೆ. ಮೂಲತಃ ಸೊರಬ ತಾಲ್ಲೂಕು ಆನವಟ್ಟಿ. ಶಿಕಾರಿಪುರ ಪಟ್ಟಣದ ಮೊಬೈಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಈತನಿಗೆ ಕೋವಿಡ್‌ರೋಗಿಯ ಸಂಪರ್ಕಕ್ಕೆ ಬಂದಿದ್ದ. ಗಂಟಲು ದ್ರವದ ವರದಿ ಬರುವವರೆಗೂ ಹೋಂಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಿದ್ದರೂ ಕೊಳಗಿ ಗ್ರಾಮಕ್ಕೆ ತೆರಳಿ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೂಡಿದ್ದ. ಮಕ್ಕಳ ಜೊತೆಗೆ ಗೋಲಿ ಆಡಿದ್ದಾನೆ. ಗ್ರಾಮದ ಅಂಗಡಿ ಮುಗ್ಗಟ್ಟುಗಳಲ್ಲಿ ಕುಳಿತುಕೊಂಡು ಚರ್ಚೆ ಮಾಡಿದ್ದಾನೆ.

ಈಗಾಗಲೇ ಈತನ ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳನ್ನು ಪರೀಕ್ಷೆ ನಡೆಸಲಾಗಿದೆ.ಕೊಳಗಿ ಗ್ರಾಮದ ಕೆಲವು ಪ್ರದೇಶ ಸೀಲ್‌ಡೋನ್ ಮಾಡಲಾಗಿದೆ ಎಂದುತಹಶೀಲ್ದಾರ್ ಎಂ.ಪಿ.ಕವಿರಾಜ್ ತಿಳಿಸಿದರು.

ಕುಂಸಿಯ ಒಬ್ಬರಿಗೆ ಪಾಸಿಟಿವ್

ಕುಂಸಿಯಲ್ಲಿ ಸೋಮವಾರ 46 ವರ್ಷದ ಪುರುಷನಿಗೆ ಕೊರೊನಾ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ. ವೈದ್ಯರ ಸಲಹೆ ಮೇರೆಗೆ ಜುಲೈ 11ರಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು.ಕುಂಸಿಯಲ್ಲಿ ಅವರು ವಾಸವಾಗಿದ್ದ ರಥ ಬೀದಿ ಸೀಲ್‌ಡೌನ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT