ಕೊರೊನಾದಿಂದ ಅಗಲಿದ ಮಹನೀಯರ ಸ್ಮರಣೆ

ತೀರ್ಥಹಳ್ಳಿ: ‘ಕೊರೊನಾ ಸೋಂಕಿನ ಆತಂಕದ ಮಧ್ಯೆ ನಾಡಿನ ಹಲವು ಚಿಂತಕರು, ಸಾಹಿತಿಗಳು, ಹೋರಾಟಗಾರನ್ನು ಕಳೆದುಕೊಂಡಿದ್ದೇವೆ. ಸಮಾಜದ ಅಂಕುಡೊಂಕು ತಿದ್ದಲು ಅವರ ಸಹಕಾರ ಸ್ಮರಣೀಯ’ ಎಂದು ಚಿಂತಕ ಕಡಿದಾಳ್ ದಯಾನಂದ್ ಹೇಳಿದರು.
ಪಟ್ಟಣದ ಕುವೆಂಪು ಸಾರ್ವಜನಿಕ ಗ್ರಂಥಾಲಯ ಸಭಾಂಗಣದಲ್ಲಿ ಈಚೆಗೆ ನಿಧನರಾದ 16 ಮಹನೀಯರಿಗೆ ಹಮ್ಮಿಕೊಂಡಿದ್ದ ‘ನುಡಿನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾನ್ಯರಂತೆ ಜೀವಿಸಿದ ಮಹನೀಯರ ಕಾರ್ಯ ಸಮಾಜಕ್ಕೆ ಮೇಲ್ಪಂಕ್ತಿ. ಯಾವುದೇ ನಿರೀಕ್ಷೆಗಳಿಲ್ಲದೆ ಸಮಾಜದ ಏಳಿಗೆಗಾಗಿ ದುಡಿದವರನ್ನು ಸ್ಮರಿಸಿಕೊಳ್ಳುವುದು ಸಮಾಜದ ಹೊಣೆಗಾರಿಕೆ ಎಂದರು.
ಶತಾಯುಷಿ ಎಚ್.ಎಸ್. ದೊರೆಸ್ವಾಮಿ, ಸಾಹಿತಿಗಳಾದ ಡಾ.ಬಿ.ಸಿದ್ದಲಿಂಗಯ್ಯ, ಜರಗನ ಹಳ್ಳಿಶಿವಶಂಕರ್, ಕೊ.ವೆಂ. ರಾಮಕೃಷ್ಣಗೌಡ, ಜಿ. ವೆಂಕಟಸುಬ್ಬಯ್ಯ, ಹೋರಾಟಗಾರರಾದ ವಿಠಲ ಭಂಡಾರಿ, ಈಸೂರು ಬಸವರಾಜ್, ಕರ್ನಾಟಕ ಕೇಂದ್ರೀಯ ವಿವಿ ಕುಲಪತಿಯಾಗಿದ್ದ ಎಚ್.ಎಂ. ಮಹೇಶ್ವರಯ್ಯ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ವಿಜ್ಞಾನ ಬರಹಗಾರ ಸುಧೀಂದ್ರ ಹಾಲ್ಡೊಡ್ಡೇರಿ, ಚಿತ್ರನಟ ಸಂಚಾರಿ ವಿಜಯ್, ಸಂಘಟಕ ಕ.ರಾ. ಕೃಷ್ಣಸ್ವಾಮಿ, ನಿವೃತ್ತ ಪೊಲೀಸ್ ಅಧಿಕಾರಿ ರವೀಂದ್ರನಾಥ್ ಟ್ಯಾಗೋರ್, ವ್ಯಂಗ್ಯಚಿತ್ರಕಾರ ಗಂಗಾಧರ್ ಅಡ್ಡೇರಿ, ಪಂಚಾಯತ್ ರಾಜ್ ವಿಭಾಗದ ಪೀತಾಂಬರಗೌಡ ಅವರಿಗೆ ನುಡಿನಮನ ಸಲ್ಲಿಸಲಾಯಿತು.
ಲೇಖಕ ಡಾ.ಜೆ.ಕೆ. ರಮೇಶ್, ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೌಲಾನಿ ಧರ್ಮಯ್ಯ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಹಾಲಿಗೆ ನಾಗರಾಜ್, ತಾಲ್ಲೂಕು ವರ್ತಕರ ಸಂಘದ ಕಾರ್ಯದರ್ಶಿ ಡಾನ್ ರಾಮಣ್ಣ, ಲೇಖಕ ಜೆ.ಕೆ.ಸತೀಶ್, ಉಪನ್ಯಾಸಕ ಡಾ.ಬಿ.ಗಣಪತಿ, ನಿವೃತ್ತ ಉಪನ್ಯಾಸಕಿ ಉಮಾದೇವಿ ಉರಾಳ್ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.