ದಾರಿಯಲ್ಲಿ ಸಿಕ್ಕ ಚಿನ್ನದ ಉಂಗುರ ಮರಳಿಸಿ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿ

ತುಮರಿ: ಕರೂರು ಹೋಬಳಿಯ ಕಾರಣಿ ಗ್ರಾಮದ ವಿದ್ಯಾರ್ಥಿಯೊಬ್ಬ ದಾರಿಯಲ್ಲಿ ಸಿಕ್ಕಿದ ಚಿನ್ನದ ಉಂಗುರವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ.
ಕಾರಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿಯ ವಿದ್ಯಾರ್ಥಿ ಕಾರ್ತಿಕ್ಗೆ ಶಾಲೆಯಿಂದ ಮನೆಗೆ ಹೋಗುತ್ತಿದ್ದಾಗ ಈಚೆಗೆ ದಾರಿಯಲ್ಲಿ ಅಂದಾಜು ₹ 25,000 ಮೌಲ್ಯದ ಉಂಗುರ ಸಿಕ್ಕಿತ್ತು. ಅದನ್ನು ಜೋಪಾನವಾಗಿ ಬ್ಯಾಗಿನಲ್ಲಿ ಇರಿಸಿಕೊಂಡು ಮನೆಗೆ ಮರಳಿದ್ದ. ಮರುದಿನ ಶಾಲೆಯ ಶಿಕ್ಷಕರಿಗೆ ಅದನ್ನು ನೀಡಿ ಪ್ರಾಮಾಣಿಕತೆ ಮೆರೆದಿದ್ದಾನೆ.
ಶಿಕ್ಷಕ ಗೋಪಾಲ ಅವರು ವಿದ್ಯಾರ್ಥಿಯ ಪ್ರಮಾಣಿಕತೆ ಮೆಚ್ಚಿ, ಎಸ್ಡಿಎಂಸಿಯಿಂದ ಪುಸ್ತಕ ಬಹುಮಾನ ನೀಡಿ ಪ್ರಶಂಸಿದ್ದಾರೆ. ಕಾರ್ತಿಕ್ ಕೃಷಿಕ ಹೊನಗೋಡು ಉಮೇಶ್, ಮೀನಾಕ್ಷಿ ದಂಪತಿಯ ಪುತ್ರ.
ಸದ್ಯ ಉಂಗುರ ಶಿಕ್ಷಕರ ಬಳಿ ಇದೆ.
‘ವಾರಸುದಾರರು ಬಂದರೆ ಕೊಡಿ. ಇಲ್ಲದಿದ್ದರೆ ಠಾಣೆಗೆ ಒಪ್ಪಿಸುವಂತೆ ಪೊಲೀಸರು ತಿಳಿಸಿದ್ದಾರೆ’ ಎಂದು ಶಿಕ್ಷಕರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.