ಶುಕ್ರವಾರ, ಮಾರ್ಚ್ 31, 2023
32 °C

ಬೆರಳ ತುದಿಯಲ್ಲಿ ಕೋಲು ನಿಲ್ಲಿಸಿ ದಾಖಲೆ ನಿರ್ಮಿಸಿದ ಶಿಕ್ಷಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಗಲ್: 2 ಇಂಚು ಅಗಲ ಮತ್ತು 50 ಇಂಚು ಉದ್ದದ ಕೋಲನ್ನು 10 ನಿಮಿಷ ಬೆರಳಿನ ತುದಿಯಲ್ಲಿ ನಿಲ್ಲಿಸಿಕೊಂಡು ದಾಖಲೆಯನ್ನು ನಿರ್ಮಿಸುವ ಮೂಲಕ ಕಾರ್ಗಲ್ ನಿವಾಸಿ ಶಿಕ್ಷಕ ಸ್ಟ್ಯಾನಿ ಲೋಪಿಸ್ ಅವರು ‘ಕರ್ನಾಟಕ ಅಚೀವರ್ಸ್ ಬುಕ್ ಆಫ್‌ ರೆಕಾರ್ಡ್ಸ್‌’ಗೆ ಸೇರ್ಪಡೆಯಾಗಿದ್ದಾರೆ. 

ಒಂದು ಬೆರಳಿನ ಮೇಲೆ 1 ನಿಮಿಷ ಸಮತೋಲನ ಕಾಯ್ದುಕೊಂಡು ನಂತರ ಆ ಬೆರಳಿನಿಂದ ಪಕ್ಕದ ಬೆರಳಿಗೆ ಕೋಲನ್ನು ವರ್ಗಾವಣೆ ಮಾಡಿ ಹತ್ತು ಬೆರಳುಗಳಲ್ಲಿಯೂ ಯಾವುದೇ ಸಹಾಯವಿಲ್ಲದೇ 10 ನಿಮಿಷಗಳ ಕಾಲ ನಿಲ್ಲಿಸಿಕೊಂಡು ದಾಖಲೆ ನಿರ್ಮಿಸಿದ್ದಾರೆ.

‘ಕರ್ನಾಟಕ ಅಚೀವರ್ಸ್ ಬುಕ್ ಆಫ್‌ ರೆಕಾರ್ಡ್ಸ್‌’ ಆಯ್ಕೆಯಾಗಿರುವುದಕ್ಕೆ ಶರಾವತಿ ಕಣಿವೆ ಯೋಜನಾ ಪ್ರದೇಶದ ವಿವಿಧ ಸಂಘ–ಸಂಸ್ಥೆಗಳು ಸ್ಟ್ಯಾನಿ ಲೋಪಿಸ್ ಅವರನ್ನು ಅಭಿನಂದಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.