ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿಬಿ ದಾಳಿ: ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಬಳಿ9.4 ಕೆ.ಜಿ ಚಿನ್ನಾಭರಣ ಪತ್ತೆ

Last Updated 25 ನವೆಂಬರ್ 2021, 4:05 IST
ಅಕ್ಷರ ಗಾತ್ರ

ಶಿವಮೊಗ್ಗ: ಗದಗ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಅವರ ಚಾಲುಕ್ಯ ನಗರದ ಮನೆಯ ಮೇಲೆ ಬುಧವಾರ ದಾಳಿ ನಡೆಸಿದ ಎಸಿಬಿ ಪೊಲೀಸರು ಚಿನ್ನಾಭರಣ, ನಗದು ವಶಕ್ಕೆ ಪಡೆದಿದ್ದಾರೆ.

ದಾಳಿಯ ಸಮಯದಲ್ಲಿ ಮನೆಯಲ್ಲಿ 9.4 ಕೆ.ಜಿ. ಚಿನ್ನಾಭರಣ, ₹ 2 ಲಕ್ಷ ಮೌಲ್ಯದ 3 ಕೆ.ಜಿ.ಬೆಳ್ಳಿ, ₹ 15.94 ಲಕ್ಷ ನಗದು, 20 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತು, ಎರಡು ಕಾರು, 3 ದ್ವಿಚಕ್ರವಾಹನಗಳುದೊರೆತಿದೆ.

ವಜ್ರದ ಆಭರಣಗಳ ಮೌಲ್ಯಮಾಪನ ನಡೆದಿದೆ. ಗೋಪಾಳದಲ್ಲಿನ ಮತ್ತೊಂದು ಮನೆಗೆ ಅಧಿಕಾರಿಗಳು ತೆರಳಿದರೂ, ಬೀಗ ಹಾಕಿದ್ದ ಕಾರಣ ಪರಿಶೀಲನೆನಡೆಸಲು ಸಾಧ್ಯವಾಗಲಿಲ್ಲ. ಚನ್ನಗಿರಿ ತಾಲ್ಲೂಕಿನ ತಣಿಗೆರೆಯ ಅವರ ಸ್ವಗ್ರಾಮಕ್ಕೂ ಒಂದು ತಂಡ ಭೇಟಿ ನೀಡಿತ್ತು. ಅಲ್ಲಿ 8 ಎಕರೆ ಜಮೀನು ಇದೆ. ಅದು ಪಿತ್ರಾರ್ಜಿತವೇ, ಖರೀದಿಸಿದ ಭೂಮಿಯೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ.

ಎಸಿಬಿ ಎಸ್‌ಪಿ ಜಯಪ್ರಕಾಶ್ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶೀಲನಾ ಕಾರ್ಯ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT