ತೀರ್ಥಹಳ್ಳಿ: ‘ಹಿಂದೂ ವಿರೋಧಿ ಯಾಗಿದ್ದ ಟಿಪ್ಪು ಸುಲ್ತಾನ್ ಸುತ್ತಮುತ್ತ ಸುಳ್ಳು ಇತಿಹಾಸ ನಿರ್ಮಾಣ ಗೊಂಡಿದೆ. ದೇವಸ್ಥಾನದ ಮೇಲಿನ ದಾಳಿ, ಮತಾಂತರ, ಕೊಡವರ ಮೇಲಿನ ಹಲ್ಲೆಗಳನ್ನು ಮರೆಮಾಚಲಾಗಿದೆ. ಮುಸ್ಲಿಮರ ಓಲೈಕೆಗಾಗಿ ಟಿಪ್ಪುವನ್ನು ವೈಭವೀಕರಿಸಲಾಗುತ್ತಿದೆ’ ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಹೇಳಿದರು.

‘ಟಿಪ್ಪು ನಿಜಕನಸುಗಳು’ ನಾಟಕ ಯಶಸ್ವಿಯಾಗಿ ನಡೆಯುತ್ತಿದೆ. ನಾಟಕದ ಪುಸ್ತಕದ 12,000 ಪ್ರತಿಗಳು ಪ್ರಕಟಗೊಂಡಿದ್ದು, 35,000 ಜನರಿಗೆ ಸಾಹಿತ್ಯ ತಲುಪಿದೆ. ಪುಸ್ತಕ ಪ್ರಕಟಣೆಗೆ ತಡೆಯಾಜ್ಞೆ ತಂದಿದ್ದರು. ನನ್ನ ಬಳಿ ಇದ್ದ ಸಾಕ್ಷಿ ಕೇಳುತ್ತಿದ್ದಂತೆ ಪ್ರಕರಣ ಹಿಂದೆ ಪಡೆದಿದ್ದು ಏಕೆ’ ಎಂದು ಶುಕ್ರವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಇತಿಹಾಸದಲ್ಲಿ ಹುದುಗಿರುವ ಸತ್ಯ, ಸುಳ್ಳುಗಳ ಬಗ್ಗೆ ತಾತ್ವಿಕ ಪ್ರತಿಭಟನೆ ಇದಾಗಿದೆ. ಚರಿತ್ರೆಯ ಪಠ್ಯದಲ್ಲಿ ಬೋಧಿಸಿದ ಅರ್ಧ ಸತ್ಯ ಬಹಿರಂಗಗೊಳಿಸುವ ಕಾಲ ಬಂದಿದೆ. ಒಂದೆರಡು ಮಾದರಿ ದೇವಸ್ಥಾನಗಳ ಮೇಲೆ ದಾಳಿ ಮಾಡಲಿಲ್ಲ ಎನ್ನುವುದನ್ನು ಬಿಟ್ಟರೆ ಕರಾಳ ಇತಿಹಾಸ ತಿಳಿಸುವ ಪ್ರಯತ್ನ ಆಗಿಲ್ಲ. ಪರ್ಶಿಯನ್ ಭಾಷೆ ಆಡಳಿತ ಭಾಷೆಯಾಗಿ ಮಾತ್ರ ಬಳಸ ಲಾಗುತ್ತಿದೆ. ಆಡಳಿತದಲ್ಲಿ ಅಂತಹ ಪದಗಳೇ ಹೆಚ್ಚಿವೆ’ ಎಂದರು.

23ಕ್ಕೆ ನಾಟಕ ಪ್ರದರ್ಶನ

ತೀರ್ಥಹಳ್ಳಿಯ ನಟಮಿತ್ರರು ಹವ್ಯಾಸಿ ಕಲಾ ಬಳಗ, ಕಡಗೋಲು ವಿಚಾರ ಮಂಥನ ವೇದಿಕೆ ಸಹಯೋಗದಲ್ಲಿ ಸೊಪ್ಪುಗುಡ್ಡೆಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ 38 ಕಲಾವಿದರು ಅಭಿನಯಿಸುವ ‘ಟಿಪ್ಪುವಿನ ನಿಜಕನಸುಗಳು’ ನಾಟಕ ಫೆ. 23ರಂದು ಪ್ರದರ್ಶನಗೊಳ್ಳಲಿದೆ. ನಾಟಕ ಪ್ರದರ್ಶನಕ್ಕೆ ₹100 ದರ ನಿಗದಿ ಮಾಡಲಾಗಿದೆ ಎಂದು ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ರಂಗಾಯಣ ನಿರ್ದೇಶನ ಸಂದೇಶ ಜವಳಿ, ಪ.ಪಂ.ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.