ಶಿವಮೊಗ್ಗ: ‘ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ, ಪ್ರಜಾಪ್ರಭುತ್ವದ ಪ್ರಥಮ ಮಾದರಿ ಎನಿಸಿದ ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾದ ಅಲ್ಲಮಪ್ರಭುದೇವರು ಕನ್ನಡದ ಅನುಭಾವ ಪರಂಪರೆಗೆ ಹೊಸ ಮೌಲ್ಯಗಳನ್ನು ಕೊಟ್ಟವರು’ ಎಂದು ಚಿಕ್ಕಮಗಳೂರಿನ ಬಸವತತ್ವ ಪೀಠದ ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.

ಬಸವಪರ ಸಂಘಟನೆಗಳು ಗುರುವಾರ ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಲ್ಲಮಪ್ರಭುದೇವರ ಜಯಂತಿ ಸಾನ್ನಿಧ್ಯವಹಿಸಿ ಅವರು ಅಶೀರ್ವಚನ ನೀಡಿದರು.

ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ, ಶೂನ್ಯಸಿಂಹಾಸನದ ಪ್ರಥಮ ಅಧ್ಯಕ್ಷರಾದ ಅಲ್ಲಮ ಪ್ರಭುಗಳು, ದೇಶ ಸಂಚಾರ ಮಾಡಿ ಸಾಮಾನ್ಯನಿಂದ ಸಾಧಕನವರೆಗೂ- ಎಲ್ಲರ ಸಾಧನೆಯ ಓರೆಕೋರೆಗಳನ್ನು ತಿದ್ದಿ ಸರಿದಾರಿಗೆ ಕಳಿಸಿದ ಮಹಾನುಭಾವಿ ಎಂದರು. ಕನ್ನಡ ಸಾಹಿತ್ಯಕ್ಕೆ ಮೌಲಿಕ ಕೊಡುಗೆ ನೀಡಿದ ಅಲ್ಲಮಪ್ರಭುಗಳ ವಚನಗಳ ಮೌಲ್ಯಗಳು ನಮಗೆಲ್ಲ ಪ್ರೇರಣೆಯಾಗಿವೆ ಎಂದರು.

ಸಾನಿಧ್ಯ ವಹಿಸಿದ್ದ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಅಲ್ಲಮಪ್ರಭುದೇವರ ಬಯಲ ತತ್ವವು ಕನ್ನಡದ ಆಧ್ಯಾತ್ಮ ಪರಂಪರೆಯ ಅಪರೂಪದ ಪರಿಕಲ್ಪನೆಯಾಗಿದೆ. ಮುಕ್ತಾಯಕ್ಕನಿಂದ ಗೋರಕ್ಷನವರೆಗೂ ಅಲ್ಲಮಗಳ ಮುಖಾಮುಖಿಯಾದ ಪ್ರತಿಯೊಬ್ಬರೂ ಬಯಲ ಸಿದ್ಧಿ ಸಾಧಿಸಿದ್ದಾರೆ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೀಶ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎನ್. ಮಹಾರುದ್ರ, ಪ್ರಧಾನ ಕಾರ್ಯದರ್ಶಿ ಬಾರಂದೂರು ಪ್ರಕಾಶ್, ವೀರಶೈವ- ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಸಜ್ಜನ್ ಈ ಸಂದರ್ಭದಲ್ಲಿ ಇದ್ದರು.

Quote - ಬಯಲಾಗುವುದು ಪ್ರತಿಯೊಬ್ಬ ಮಾನವನಿಗೂ ಸಾಧ್ಯ. ತಾನು ಬದುಕಿನ ಯಾವುದೇ ಸ್ಥಿತಿಯಲ್ಲಿದ್ದರೂ ಬಯಲಿನೆಡೆಗೆ ಸಾಗುವ ಸುಲಭ ಮಾರ್ಗ ತೋರಿದ್ದು ಅಲ್ಲಮಪ್ರಭು ದೇವರು. ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಬೆಕ್ಕಿನಕಲ್ಮಠ ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.