ಆನವಟ್ಟಿ: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶಾಂತಿನಗರದ (ಸಂತೆ ಮಾರುಕಟ್ಟೆ) ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಇಲಾಖೆಯ ಅಧಿಕಾರಿಗಳು ಬಾಡಿಗೆ ಕಟ್ಟಡಕ್ಕೆ ಅಂಗನಾವಾಡಿಯನ್ನು ಸ್ಥಳಾಂತರ ಮಾಡಿಸಿದ್ದು, ಆ ಜಾಗ ಕಲಿಕೆಗೆ ಸೂಕ್ತವಾಗಿಲ್ಲ ಎಂಬುದು ಪಾಲಕರ ಆರೋಪವಾಗಿದೆ.

ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿರುವ ಸ್ಥಳದಲ್ಲಿ ವಾರಕ್ಕೊಮ್ಮೆ ಸಂತೆ ನಡೆಯುತ್ತದೆ. ಪಕ್ಕದಲ್ಲೇ ಮೀನು ಮಾರುಕಟ್ಟೆ ಇರುವುದರಿಂದ, ನಿತ್ಯ ದುರ್ನಾತದ ನಡುವೆಯೇ ವಿದ್ಯಾರ್ಥಿಗಳು ಓಡಾಡಬೇಕಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇದು ಸರಿಯಲ್ಲ ಎಂಬುದು ಪಾಲಕರ ನಆರೋಪವಾಗಿದೆ.

ಅಂಗನವಾಡಿ ಎದುರು ಚಿತ್ರಮಂದಿರವೂ ಇದ್ದು, ಈ ರಸ್ತೆಯಲ್ಲಿ ವಾಹನಗಳ ಸಂಚಾರ ಅಧಿಕವಾಗಿದೆ. ಮಕ್ಕಳ ಸುರಕ್ಷತೆ ಬಗ್ಗೆ ಪಾಲಕರು ಅವರು ಆಂತಕ ವ್ಯಕ್ತಪಡಿಸಿದ್ದಾರೆ.

‘ಕಿರಿದಾದ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿದೆ. ಕಲಿಕೆಗೆ ಕಟ್ಟಡ ಸೂಕ್ತವಾಗಿಲ್ಲ. ವಿದ್ಯಾರ್ಥಿಗಳಿಗೆ ಕಲಿಯಲು ಮತ್ತು ಆಟವಾಡಲು ಜಾಗವಿರುವಂತೆ ಇಲಾಖೆಯ ಅಧಿಕಾರಿಗಳು ನಿವೇಶನ ಗುರುತಿಸಿ ಅಂಗನವಾಡಿಯ ನೂತನ ಕಟ್ಟಡ ಮಂಜೂರು ಮಾಡಬೇಕು’ ಎಂದು ವ್ಯಾಪಾರಿ ಎಂ. ಮಂಜುನಾಥ ಕೋರುತ್ತಾರೆ.

ಅಂಗನವಾಡಿಯ ಹಳೆ ಕಟ್ಟಡದ ನೆಲಹಾಸು, ಬಾಗಿಲು ಹಾಳಾಗಿವೆ. ಹೆಂಚುಗಳು ಒಡೆದು ಮಳೆಗಾಲದಲ್ಲಿ ಕಟ್ಟಡ ಸೋರುತ್ತದೆ. ಅಂತೆಯೇ ಹಳೆಯ ಕಟ್ಟಡ ನೆಲಸಮ ಮಾಡಿ, ಹೊಸ ಕಟ್ಟಡ ನಿರ್ಮಾಣ ಆಗುವವರೆಗೆ ಬಾಡಿಗೆ ಮನೆಯಲ್ಲಿ ಅಂಗನವಾಡಿ ನಡೆಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತರು ಹೇಳುತ್ತಾರೆ.

ಶಾಂತಿನಗರದಲ್ಲಿ ನಿರ್ಮಾಣವಾಗಿರುವ ನೂತನ ಲೇಔಟ್ನಲ್ಲಿ ಸಾರ್ವಜನಿಕ ಉಪಯೋಗಕ್ಕೆ ಜಾಗ ಬಿಡಲಾಗಿದೆ. ಅಲ್ಲಿಯೇ ಹೊಸ ಕಟ್ಟಡ ನಿರ್ಮಿಸಬೇಕೆಂದು ಪಾಲಕರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.

ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಮಕ್ಕಳ ಸುರಕ್ಷತೆಯಿಂದ ಸೂಕ್ತ ಸ್ಥಳವಲ್ಲ. ಇಲಾಖೆಯ ಅಧಿಕಾರಿಗಳು ಕೂಡಲೇ ನೂತನ ಅಂಗನವಾಡಿ ನಿರ್ಮಿಸಲು ಕ್ರಮ ಕೈಗೊಳ್ಳಬೇಕು

ಶಾಂತಪ್ಪ, ಸ್ಥಳೀಯರು

ಅಂಗನವಾಡಿಗೆ ನಿವೇಶನ ಒದಗಿಸುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಕೇಳಿಕೊಂಡಿದ್ದೇವೆ. ನಿವೇಶನ ಒದಗಿಸಿದ ಕೂಡಲೇ ನೂತನ ಕಟ್ಟಡ ಮಂಜೂರು ಮಾಡಲು ಇಲಾಖೆಗೆ ಶಿಫಾರಸು ಮಾಡಲಾಗುವುದು
ಸೋಮಶೇಖರ್, ಶಿಶು ಅಭಿವೃಧಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.