ಆನವಟ್ಟಿ: ಇಲ್ಲಿನ ಪ.ಪಂ. ವ್ಯಾಪ್ತಿಯ ತಿಮ್ಮಾಪುರ ಬಡಾವಣೆಯ ಒಳ ರಸ್ತೆಗೆ ಹೋಗುವ ದಾರಿಯಲ್ಲಿ ವಿದ್ಯುತ್ ಪರಿವರ್ತಕ ಆಳವಡಿಸಿದ್ದರಿಂದ ರಸ್ತೆ ಕಿರಿದಾಗಿದೆ. ವಿದ್ಯುತ್ ಕಂಬಗಳು ಬಾಗಿದ್ದು ಯಾವುದೇ ಸಂದರ್ಭದಲ್ಲಿ ಅಪಾಯ ಉಂಟಾಗುವ ಸ್ಥಿತಿ ಇರುವುದರಿಂದ ಮೆಸ್ಕಾಂ ಅಧಿಕಾರಿಗಳು ಕೂಡಲೇ ವಿದ್ಯುತ್ ಪರಿವರ್ತಕವನ್ನು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಕೆಲವು ವರ್ಷಗಳ ಹಿಂದೆ ಮೇಕೆಗಳು ವಿದ್ಯುತ್ ತಗುಲಿ ಮೃತಪಟ್ಟಿವೆ. ಈ ರಸ್ತೆಗೆ ಅಂಟಿಕೊಂಡು ರೈತರ ಜಮೀನುಗಳು ಇದ್ದು, ಜೋಳ, ಭತ್ತ, ಅಡಿಕೆ ಫಸಲನ್ನು ತೆಗೆದುಕೊಳ್ಳಲು ಯಾವುದೇ ವ್ಯಾಪಾರಿ ಮುಂದಾಗುತ್ತಿಲ್ಲ. ಕಾರಣ ಈ ರಸ್ತೆ ಕಿರಿದಾಗಿದ್ದು, ವಿದ್ಯುತ್ ಪರಿವರ್ತಕ ಇರುವುದರಿಂದ ವಾಹನಗಳು ಹೋಗಿ ಬರುವುದು ಕಷ್ಟ. ರೈತರಿಗೆ ಹಾಗೂ ನಿವಾಸಿಗಳಿಗೆ ಅನುಕೂಲ ಮಾಡಿಕೊಂಡುವ ದೃಷ್ಟಿಯಿಂದ ಕೂಡಲೇ ವಿದ್ಯುತ್ ಪರಿವರ್ತಕವನ್ನು ಸ್ಥಳಾಂತರ ಮಾಡಿ’ ಎಂದು ಗ್ರಾಮದ ನಿವಾಸಿಗಳಾದ ಸುರೇಶ್, ಮಂಜುನಾಥ, ಅಶ್ವಿನಿ, ಮಾರುತಿ, ತಿಮ್ಮಾಪುರ ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-42-1529137551

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.