ಆನವಟ್ಟಿ: ‘ವಿದ್ಯಾರ್ಥಿಗಳು ಪುಸ್ತಕ ಹಾಗೂ ಸಾಹಿತ್ಯ ಅಧ್ಯಯನ ಮಾಡುವ ಹವ್ಯಾಸ ಬೆಳೆಸಿಕೊಳ್ಳಿ. ಇದರಿಂದ ಜ್ಞಾನ ಹೆಚ್ಚುತ್ತದೆ’ ಎಂದು ನಿವೃತ್ತ ಪ್ರಾಂಶುಪಾಲ ಎಚ್. ಜಯಪ್ಪ ಸಲಹೆ ನೀಡಿದರು.

ಉಪನ್ಯಾಸಕ ಎಚ್.ಟಿ. ಕರಬಸಪ್ಪ ಹಾಗೂ ಸುನಂದಾ ದಂಪತಿಯ ವಿನೋದ ನಿಲಯದಲ್ಲಿ ಹಮ್ಮಿಕೊಂಡಿದ್ದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಜ್ಞಾನಾರ್ಜನೆಯ ಜೊತೆಗೆ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಹಾಗಾಗಿ ಕನ್ನಡ ಪ್ರಾಧಿಕಾರದಿಂದ ಒಂದು ಲಕ್ಷ ಮನೆಗಳಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ’ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ್ ಶೇಟ್ ತಿಳಿಸಿದರು.

‘ಮನೆಗೆ ದೇವರ ಮನೆ, ಅಡುಗೆ ಮನೆ ಎಷ್ಟು ಮುಖ್ಯವೋ ಹಾಗೆ ಮನೆಗೊಂದು ಗ್ರಂಥಾಲಯ ತೆರೆಯುವುದಕ್ಕೂ ಆದ್ಯತೆ ನೀಡಬೇಕು. ಸಾಹಿತ್ಯ ಓದುವತ್ತ ಗಮನ ಹರಿಸಿದರೆ ಮನಸ್ಸಿಗೆ ನೆಮ್ಮದಿ ದೊರಕುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಓಲೈಕೆ, ಪ್ರಶಸ್ತಿಗಾಗಿ ಕಥೆ–ಕಾದಂಬರಿಗಳನ್ನು ರಚಿಸುವ ಬದಲು ಮೌಲ್ಯಗಳನ್ನು ಒಳಗೊಂಡ ಸಾಹಿತ್ಯ ರಚನೆಯಾಗಬೇಕು’ ಎಂದು ಉಪನ್ಯಾಸಕ ಎಚ್.ಟಿ ಕರಬಸಪ್ಪ ಹೇಳಿದರು.

ಜಾನಪದ ಕಲಾವಿದ, ರಾಜ್ಯ ಪ್ರಶಸ್ತಿ ಪುರಸ್ಕೃತ ಗಡ್ಡಪ್ಪ ಜೋಗಿ, ಅಶೋಕ ತತ್ತೂರು ಹಾಗೂ ಸಂಗಡಿಗರಿಂದ ಜಾನಪದ ಗೀತ ಗಾಯನ ಕಾರ್ಯಕ್ರಮ ನಡೆಯಿತು.

ಅತ್ಯುತ್ತಮ ಮಾದರಿ ಗ್ರಂಥಾಲಯ ನಿರ್ವಾಹಣೆ ಮಾಡಿರುವ ತಾಲ್ಲೂಕು ಗ್ರಂಥಾಲಯ ಅಧಿಕಾರಿ ಟಿ.ಜಿ.ಕೃಷ್ಣಮೂರ್ತಿ ಹಾಗೂ ಮನೆಯನ್ನೇ ಗ್ರಂಥಾಲಯ ಮಾಡಿಕೊಂಡಿರುವ ಎಚ್.ಟಿ. ಕರಬಸಪ್ಪ ಹಾಗೂ ಸುನಂದಾ ದಂಪತಿಯನ್ನು ಸನ್ಮಾನಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಆನವಟ್ಟಿ ಘಟಕದ ಅಧ್ಯಕ್ಷ ಬಸವನಗೌಡ ಮಲ್ಲಾಪುರ, ಸಾಹಿತಿಗಳಾದ ತೂಗು ನಾಗರಾಜ, ಅರುಣ್ ಕುಮಾರ್ ಹುರುಳಿ, ಉಪನ್ಯಾಸಕ ಉಮೇಶ್ ಭದ್ರಾಪುರ, ನಿವೃತ್ತ ಉಪನ್ಯಾಸಕ ಉಮೇಶ್ ಬಿಚ್ಚುಗತ್ತಿ, ಶಿಕ್ಷಕ ದೇವರಾಜ್, ಶಿಕ್ಷಕಿಯರಾದ ಗಾಯತ್ರಿ ಅಶೋಕ್, ಮಂಜುಳಾ ಶೇಟ್, ಸುನೀತಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-42-1054770054

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.