ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತೊಂದು ವಾರ ಲಾಕ್‌ಡೌನ್

Last Updated 20 ಜೂನ್ 2021, 2:01 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯ ಕೋವಿಡ್‌ ಪಾಸಿವಿಟಿ ದರ ಶೇ 5ಕ್ಕಿಂತ ಹೆಚ್ಚಿರುವ ಕಾರಣ ಜೂನ್‌ 21ರಿಂದ ಮತ್ತೊಂದು ವಾರ ಲಾಕ್‌ಡೌನ್‌ ಮುಂದುವರಿಯಲಿದೆ.

ಶಿವಮೊಗ್ಗ ಸೇರಿ ರಾಜ್ಯದ 13 ಜಿಲ್ಲೆಗಳಲ್ಲಿ ಸರ್ಕಾರ ಜೂನ್‌ 11ರಂದು ಹೊರಡಿಸಿದ ಆದೇಶದಂತೆ ಲಾಕ್‌ಡೌನ್‌ ಜಾರಿಯಲ್ಲಿರುತ್ತದೆ.

ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟಕ್ಕೆ ಮಧ್ಯಾಹ್ನ 2ರವರೆಗೆ ಅವಕಾಶವಿರುತ್ತದೆ. ಉಳಿದಂತೆ ಕೈಗಾರಿಕಾ ಚಟುವಟಿಕೆಗೆ ಈಗಿರುವಂತೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.

ಅಡಿಕೆ ಮಂಡಿ ಸೇರಿ ಎಪಿಎಂಸಿ ಸಗಟು ವ್ಯಾಪಾರಕ್ಕೆ ಹಾಗೂ ಟೆಂಡರ್‌ಗಳಲ್ಲಿ ಭಾಗವಹಿಸುವವರಿಗೆ ಈಗಿರುವಂತೆ ಪಾಸ್‌ ಆಧಾರದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಇತರೆ ಅಂಗಡಿಗಳ ವ್ಯಾಪಾರಕ್ಕೆ ಅವಕಾಶ ಇಲ್ಲ. ಹೋಟೆಲ್‌ಗಳಲ್ಲಿ ಎಂದಿನಂತೆ ಪಾರ್ಸೆಲ್‌ ವ್ಯವಸ್ಥೆಯಷ್ಟೇ ಇರುತ್ತದೆ. ಅನಗತ್ಯ ಓಡಾಟ, ವಾಹನಗಳ ಸಂಚಾರದ ಮೇಲೆ ನಿರ್ಬಂಧ ಮುಂದುವರಿಯಲಿದೆ.

200ರ ಕೆಳಗಿಳಿದ ಸೋಂಕಿತರ ಸಂಖ್ಯೆ

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶನಿವಾರ 200ಕ್ಕಿಂತ ಕೆಳಗಿಳಿದಿದೆ. ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದ 3,829 ಜನರಲ್ಲಿ 198 ಪಾಸಿಟಿವ್‌ ಇರುವುದು ದೃಢಪಟ್ಟಿದೆ. 3132 ಜನರ ವರದಿ ನೆಗೆಟಿವ್‌ ಬಂದಿದೆ. ಗುಣಮುಖರಾದ 516 ಜನರು ಮನೆಗೆ ಮರಳಿದ್ದಾರೆ. ಆಸ್ಪತ್ರೆ, ವಿವಿಧ ಆರೈಕೆ ಕೇಂದ್ರಗಳೂ ಸೇರಿ 2,840 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಐವರು ಸೇರಿ ಇದುವರೆಗೆ ಕೋವಿಡ್‌ನಿಂದ 942 ಜನರು ಮೃತಪಟ್ಟಿದ್ದಾರೆ.

ಶಿವಮೊಗ್ಗ ತಾಲ್ಲೂಕಿನಲ್ಲಿ 84, ಭದ್ರಾವತಿ 54, ತೀರ್ಥಹಳ್ಳಿ 5, ಶಿಕಾರಿಪುರ 14, ಸಾಗರ 21, ಹೊಸನಗರ 8, ಸೊರಬ 6 ಹಾಗೂ ಇತರೆ ಜಿಲ್ಲೆಗಳಿಂದ ಚಿಕಿತ್ಸೆಗೆ ಬಂದಿದ್ದ 6 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT