ಆನವಟ್ಟಿ: ‘ಮನುಷ್ಯನ ಬಹುಮುಖ್ಯ ಅಂಗವಾದ ಕಣ್ಣಿನ ಚಿಕಿತ್ಸೆಗೆ ಹಲವೆಡೆ ಕೇಂದ್ರಗಳನ್ನು ತೆರೆದು ಉತ್ತಮ ಹೆಸರು ಮಾಡಿರುವ ಸಂಸ್ಥೆ ಇಲ್ಲಿ ನೂತನ ಕೇಂದ್ರ ತೆರೆದಿದೆ. ಇದರ ಪ್ರಯೋಜನವನ್ನು ನಾಗರಿಕರು ಪಡೆದುಕೊಳ್ಳಿ’ ಎಂದು ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ ತಿಳಿಸಿದರು.

ಬುಧವಾರ ಆನವಟ್ಟಿ ಡಿಸಿಸಿ ಬ್ಯಾಂಕ್ ಮುಂಭಾಗದಲ್ಲಿ ಡಾ.ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹಾಗೂ ಎಸ್ಜಿಎಂ ಟ್ರಸ್ಟ್ನಿಂದ 24ನೇ ದೃಷ್ಟಿ ಕೇಂದ್ರ ಆರಂಭ ಹಾಗೂ ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಬಂಕಸಾಣದ ಸಮಾಧಾನ ಮಠದ ಘನಬಸವ ಅಮರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶಿಬಿರದಲ್ಲಿ ನೂರಾರು ಜನರ ನೇತ್ರ ತಪಾಸಣೆ ಮಾಡಲಾಯಿತು. ಅಗತ್ಯವಿರುವವರನ್ನು ಉಚಿತ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಿಕೊಳ್ಳಲಾಯಿತು.

ರಾಜ್ಯ ನೇತ್ರತಜ್ಞ ಸಂಘದ ಅಧ್ಯಕ್ಷ ಡಾ.ಕೆ.ವಿ ಶಿವರಾಮ (ಶಿರಸಿ), ಗ್ಲಾಕೋಮಾ ತಜ್ಞೆ ಡಾ.ತನುಶ್ರೀ ಹೆಗಡೆ, ಕೇಂದ್ರ ಕಾರ್ಯ ನಿರ್ವಾಹಕ ಕುತುಬುದ್ದೀನ್ ಮುಲ್ಲಾ ಉಪನ್ಯಾಸ ನೀಡಿ, ಅಂಧತ್ವ ನಿವಾರಣೆ ಮಾಡುವುದಕ್ಕಾಗಿ ಈಗ ಆರಂಭವಾಗಿರುವ ದೃಷ್ಟಿಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-42-1909420387

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.