ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳಗಾರು ಮಠದ ಉತ್ತರಾಧಿಕಾರಿಯಾಗಿ ಅಕ್ಷ್ಯೋಭ್ಯರಾಮಪ್ರಿಯ ತೀರ್ಥರ ನೇಮಕ

Published 24 ಮೇ 2023, 14:01 IST
Last Updated 24 ಮೇ 2023, 14:01 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಬಾಳಗಾರು ಶ್ರೀಮದಾರ್ಯಅಕ್ಷೋಭ್ಯತೀರ್ಥ ಸಂಸ್ಥಾನದ ರಘುಭೂಷಣತೀರ್ಥ ಶ್ರೀಪಾದರು ನೂತನ ಉತ್ತರಾಧಿಕಾರಿಯನ್ನಾಗಿ ಅಕ್ಷೋಭ್ಯರಾಮಪ್ರಿಯ ತೀರ್ಥರ ಪಟ್ಟಾಭಿಷೇಕವನ್ನು ಬುಧವಾರ ನೆರವೇರಿಸಿದರು.

ಮೇ 21ರಿಂದ ಮಠದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಸತ್ಕರ್ಮಗಳು ನಡೆದವು. ಬುಧವಾರ ಬೆಳಿಗ್ಗೆ ವಿರಾಜಾಮಂತ್ರಹೋಮ, ತತ್ವಹೋಮ ನಂತರ ಪಟ್ಟಾಭಿಷೇಕ ನೆರವೇರಿತು.

ಸನ್ಯಾಸತ್ವ ಸ್ವೀಕರಿಸಿದ ಅಕ್ಷೋಭ್ಯರಾಮಪ್ರಿಯ ತೀರ್ಥರ ಪೂರ್ವಾಶ್ರಮದ ಹೆಸರು ಮಾನಕರಿ ಶ್ರೀನಿವಾಸಾಚಾರ್ಯ.

ಬಳ್ಳಾರಿಯ ಮಾನಕರಿ ಹುಲಿಕುಂಟಾಚಾರ್ಯ ಮತ್ತು ಸಾವಿತ್ರಮ್ಮ ದಂಪತಿಯ ಪುತ್ರರಾದ ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕರಾಗಿ 30 ವರ್ಷ ಸೇವೆ ಸಲ್ಲಿಸಿದ್ದಾರೆ. 2005ರಲ್ಲಿ ಹಂಪಿ ವಿಶ್ವವಿದ್ಯಾಲಯದಿಂದ ‘ಹರಿದಾಸ ಸಾಹಿತ್ಯ – ಶ್ರೀಮದ್ಭಗವತ’ ಋಣ ಮತ್ತು ವೃದ್ಧಿ ಎಂಬ ಮಹಾಪ್ರಬಂಧಕ್ಕೆ ಪಿಎಚ್‌.ಡಿ ಪದವಿ ಪಡೆದುಕೊಂಡಿದ್ದಾರೆ. ಅವರಿಗೆ ಮಂತ್ರಾಲಯ ಮಠವು ‘ಸುಜಯಶ್ರೀ’ ಪ್ರಶಸ್ತಿ, ತಿರುಪತಿ ತಿರುಮಲ ದೇವಸ್ಥಾನ ಪುರಂದರ ಪ್ರಶಸ್ತಿ ನೀಡಿ ಗೌರವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT