‘ಜಲಾಶಯದಿಂದ ಒಮ್ಮೆಲೇ ನೀರು ಬಿಡುವುದರಿಂದ ತಗ್ಗು ಪ್ರದೇಶಗಳಲ್ಲಿ ನೀರು ನುಗುತ್ತದೆ ಮತ್ತು ಏಕಕಾಲಕ್ಕೆ ಅಷ್ಟೊಂದು ನೀರು ಬಿಡುವುದರಿಂದ ಸುಮಾರು 100ರಿಂದ 150 ಕಿ.ಮೀ. ವೇಗದಲ್ಲಿ ನೀರು ಹರಿಯುತ್ತದೆ. ಇದರಿಂದ ಅನಾಹುತಗಳು ಸಂಭವಿಸಬಹುದು ಎಂಬ ಕಾರಣಕ್ಕೆ ಮುಂಜಾಗ್ರತೆಯಾಗಿ ಶುಕ್ರವಾರ ಸಹ ನದಿಗಳಿಗೆ ಒಂದೇ ಪ್ರಮಾಣದಲ್ಲಿ ಸತತವಾಗಿ ನೀರು ಹರಿಸಲಾಗಿದೆ. ಶುಕ್ರವಾರ ಸಂಜೆ 7ರವರೆಗೂ ಜಲಾಶಯದಿಂದ 52,000 ಕ್ಯುಸೆಕ್ ನೀರು ಬಿಡಲಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ’ ಎಂದು ತಾಲ್ಲೂಕು ತಹಶೀಲ್ದಾರರಾದ ಕೆ.ಆರ್. ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.