ರಿಪ್ಪನ್‌ಪೇಟೆ: ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆನೋಡ್ಲು ಗ್ರಾಮದಿಂದ ಗೋವುಗಳನ್ನು ಅಕ್ರಮವಾಗಿ ಕಡಿತಲೆ ಮಾಡಿ, ಮಾಂಸ ಮಾರಾಟಕ್ಕೆ ಕೊಂಡೊಯ್ಯುವಾಗ ರಿಪ್ಪನ್‌ಪೇಟೆ ಠಾಣೆ ಪೊಲೀಸರು ವಾಹನ ಸಹಿತ ಮೂವರು ಆರೋಪಿಗಳನ್ನು ಮುಗುಡ್ತಿ ಗ್ರಾಮದ ಬಳಿ ಶುಕ್ರವಾರ ಬಂಧಿಸಿದ್ದಾರೆ.
ಎಣ್ಣೆನೋಡ್ಲು ಗ್ರಾಮದ ನಿವಾಸಿಗಳಾದ ಅಕ್ರಂ (32), ಭಾಷಾ (30) ಮತ್ತು ಸಾದಿಕ್ (40) ಬಂಧಿತರು.
ಅವರಿಂದ 80 ಕೆ.ಜಿ. ದನದ ಹಸಿ ಮಾಂಸ ಮತ್ತು ಒಂದು ಪ್ಯಾಸೆಂಜರ್ ಆಟೊವನ್ನು ವಶಕ್ಕೆ ಪಡೆಯಲಾಗಿದೆ.