ಶಿವಮೊಗ್ಗ: ಇಲ್ಲಿನ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕೇಂದ್ರ ಕಚೇರಿಯ ಆವರಣದಲ್ಲಿ ಸಹಕಾರ ಸಂಘಗಳ ಪದಾಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ರೈತರಿಗೆ ಶುಕ್ರವಾರ ಒಂದು ದಿನದ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.

‘ನೀರು ಬಳಕೆದಾರರ ಸಹಕಾರ ಸಂಘಗಳು ರೈತ ಉತ್ಪಾದಕ ಸಂಸ್ಥೆಗಳಾಗಿ (ಎಫ್ಪಿಒ) ಬೆಳೆಯಬೇಕು’ ಎಂದು ಮುಖ್ಯ ಅತಿಥಿಯಾಗಿದ್ದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಕೆ.ಶಶಿಧರ್ ತಿಳಿಸಿದರು.

‘ಸಹಕಾರ ರಂಗವು ತುಂಬಾ ವಿಶಾಲವಾಗಿದೆ. ಹೀಗಾಗಿ ನೀರು ಬಳಕೆದಾರರ ಸಂಘದವರು ವಿವಿಧ ಉದ್ದೇಶಗಳನ್ನು ಸಾಧಿಸುವ ಸಂಘಗಳಾಗಿ ಬೆಳೆಯಬೇಕು’ ಎಂದು ಭದ್ರಾ ಕಾಡಾ ಅಧ್ಯಕ್ಷ ಕೆ.ಪಿ.ಅಂಶುಮಂತ್ ಸಲಹೆ ನೀಡಿದರು.

ಇದೇ ವೇಳೆ ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಮತ್ತು ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಒಟ್ಟು 80 ನೀರು ಬಳಕೆದಾರ ಸಹಕಾರ ಸಂಘಗಳಿಗೆ ತಲಾ ₹ 1 ಲಕ್ಷ ವಾರ್ಷಿಕ ಕಾರ್ಯಾನುದಾನದ ಚೆಕ್ ವಿತರಿಸಲಾಯಿತು. ಕೃಷಿ ಮತ್ತು ಸಹಕಾರ ವಿಭಾಗದಿಂದ ನೀಡಿದ ಹೋಲ್ ಡಿಗ್ಗರ್ ಮತ್ತು ವೀಡ್ ಕಟ್ಟರ್ ಯಂತ್ರಗಳನ್ನು 70ಕ್ಕೂ ಹೆಚ್ಚು ಸಂಘಗಳಿಗೆ ವಿತರಿಸಲಾಯಿತು.

ಭದ್ರಾ ಕಾಡಾ ಆಡಳಿತಾಧಿಕಾರಿ ಆರ್.ಸತೀಶ್, ಸಹಾಯಕ ಎಂಜಿನಿಯರ್ ರವೀಂದ್ರ, ಸಹಕಾರ ಸಂಘಗಳ ಜಂಟಿ ನಿಬಂಧಕ ನಾಗೇಶ್ ಎಸ್. ಡೋಂಗರೆ, ಸಹಾಯಕ ನಿಬಂಧಕ ಮಂಜುನಾಥ ಮತ್ತು ತಾಂತ್ರಿಕ ವಿಭಾಗದ ಭೂ ಅಭಿವೃದ್ಧಿ ಅಧಿಕಾರಿ ಕೆ.ಪ್ರಶಾಂತ್, ಸಹಾಯಕ ನಿರ್ದೇಶಕ ವೈ.ನಾಗೇಂದ್ರ ರಾವ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.