ಹೊಳೆಹೊನ್ನೂರು: ಪಟ್ಟಣದಲ್ಲಿರುವ ಭದ್ರಾ ನದಿ ಸೇತುವೆ ಬಳಿ ಈಚೆಗೆ ಸ್ನಾನ ಮಾಡಲು ನೀರಿಗೆ ಇಳಿದಿದ್ದ ಯುವಕ ಮುಳುಗಿ ಮೃತಪಟ್ಟಿದ್ದಾರೆ.

ಚಿತ್ರದುರ್ಗ ಜಿಲ್ಲೆ ಪಾಮರಳ್ಳಿ ಗ್ರಾಮದ ಮೊಹಿದ್ದೀನ್ (16) ಮೃತ ಯುವಕ.

ಘಟನೆ ವಿವರ: ಚಾಲಕರಾಗಿರುವ ಇಮಾಮ್ ಸಾಬ್ ಅವರು ಕುಟುಂಬ ಸಮೇತ ಆನಂದಪುರ ಸಮೀಪದ ಹಣಗೆರೆಕಟ್ಟೆಗೆ ಹೊರಟಿದ್ದರು. ಈ ವೇಳೆ ಪಟ್ಟಣದ ಭದ್ರಾ ನದಿಯ ಹಳೆ ಸೇತುವೆ ಕೆಳಗೆ ಇಳಿದು ನದಿ ಬಳಿ ಊಟಕ್ಕೆಂದು ಕುಳಿತಿದ್ದರು. ಅದೇ ವೇಳೆ ಸ್ನಾನ ಮಾಡಲು ಹೋಗಿದ್ದ ಮೊಹಿದ್ದೀನ್ ನೀರಿನಲ್ಲಿ ಮುಳುಗುತ್ತಿದ್ದ. ಸಹಾಯಕ್ಕೆ ಹೋದ ಸಹೋದರ ತಾಜುದ್ದೀನ್ ಕೂಡ ಮುಳುಗುತ್ತಿದ್ದ. ಇದನ್ನು ಕಂಡ ಇಮಾಮ್ ಸಾಬ್ ತಾಜುದ್ದೀನ್ನನ್ನು ರಕ್ಷಿಸಿದ್ದಾರೆ. ಆದರೆ ಮೊಹಿದ್ದೀನ್ನನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಸ್ಥಳೀಯರ ಸಹಕಾರದಿಂದ ಮೃತ ದೇಹವನ್ನು ಹೊರತೆಗೆಯಲಾಯಿತು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯರ ಆಕ್ರೋಶ: ಪಟ್ಟಣದ ಭದ್ರಾ ನದಿ ಹಳೆ ಸೇತುವೆ ಸಮೀಪದಲ್ಲೇ ಅಕ್ರಮ ಮರಳುಗಾರಿಕೆಗಾಗಿ ಅಲ್ಲಲ್ಲಿ ಗುಂಡಿ ತೋಡಲಾಗಿದೆ. ಇವುಗಳಲ್ಲಿ ನೀರು ಸಂಗ್ರಹವಾಗಿದ್ದು, ಇದನ್ನು ಅರಿಯದೆ ಅನೇಕರು ನೀರಿಗಿಳಿದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಮರಳು ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-42-1121289454

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.